ಜೆಡಿಎಸ್‌ ಬಂಡಾಯ ಶಾಸಕರ ಅನರ್ಹಗೊಳಿಸುವ ಪ್ರಕರಣ: ಮೇಲ್ಮನವಿ ವಿಚಾರಣೆ ಪೂರ್ಣ

7

ಜೆಡಿಎಸ್‌ ಬಂಡಾಯ ಶಾಸಕರ ಅನರ್ಹಗೊಳಿಸುವ ಪ್ರಕರಣ: ಮೇಲ್ಮನವಿ ವಿಚಾರಣೆ ಪೂರ್ಣ

Published:
Updated:
ಜೆಡಿಎಸ್‌ ಬಂಡಾಯ ಶಾಸಕರ ಅನರ್ಹಗೊಳಿಸುವ ಪ್ರಕರಣ: ಮೇಲ್ಮನವಿ ವಿಚಾರಣೆ ಪೂರ್ಣ

ಬೆಂಗಳೂರು: ಜೆಡಿಎಸ್‌ನ ಏಳು ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿರುವ ದೂರಿನ ಕುರಿತ ತೀರ್ಪನ್ನು ಮೇ 7ರೊಳಗೆ ಪ್ರಕಟಿಸುವಂತೆ ಸ್ಪೀಕರ್‌ಗೆ ನಿರ್ದೇಶಿಸಿ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ಪೂರ್ಣಗೊಂಡಿದೆ.

ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ರಜಾಕಾಲದ ವಿಭಾಗೀಯ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ.

ವಿಚಾರಣೆ ವೇಳೆ ನ್ಯಾಯಮೂರ್ತಿ ವೀರಪ್ಪ, 'ಇನ್ನು ಮೂರ್ನಾಲ್ಕು ದಿನದಲ್ಲಿ ಶಾಸನಸಭೆ ಅವಧಿ ಪೂರ್ಣವಾಗುತ್ತಿದೆ. ಇನ್ನೂ ಯಾವಾಗ ಆದೇಶ ಪ್ರಕಟಿಸುತ್ತೀರಿ' ಎಂದು ಅಡ್ವೊಕೇಟ್ ಜನರಲ್ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry