ಕಣ್ಣಿಗೆ ಚಿಕಿತ್ಸೆ ನೀಡಲಿದ್ದಾನೆ ‘ಐಡಿಎಕ್ಸ್‌–ಡಾಕ್ಟರ್‌’!

7

ಕಣ್ಣಿಗೆ ಚಿಕಿತ್ಸೆ ನೀಡಲಿದ್ದಾನೆ ‘ಐಡಿಎಕ್ಸ್‌–ಡಾಕ್ಟರ್‌’!

Published:
Updated:
ಕಣ್ಣಿಗೆ ಚಿಕಿತ್ಸೆ ನೀಡಲಿದ್ದಾನೆ ‘ಐಡಿಎಕ್ಸ್‌–ಡಾಕ್ಟರ್‌’!

ಕಣ್ಣಿನ ಪಾಪೆಗೆ ತೊಂದರೆಯಾದರೆ ಇನ್ನು ಕಣ್ಣಿನ ತಜ್ಞ ವೈದ್ಯರನ್ನು ಹುಡುಕಿಕೊಂಡು ಹೋಗುವ ಪ್ರಮೇಯ ಇರುವುದಿಲ್ಲ. ನಿಮ್ಮ ಕಣ್ಣಿನ ಹಾಗೂ ಪಾಪೆಯ ಚಿತ್ರವನ್ನು ಸೆರೆ ಹಿಡಿಯುವ ಮೂಲಕ ಕಣ್ಣಿಗೆ ಏನಾಗಿದೆ, ಅದಕ್ಕೆ ಯಾವ ಚಿಕಿತ್ಸೆ  ಮಾಡಬೇಕು ಎಂದು ತಿಳಿಸುವ ‘ಐಡಿಎಕ್ಸ್‌–ಡಾಕ್ಟರ್‌’ ಎಂಬ ಉಪಕರಣವನ್ನು ಅಭಿವೃದ್ಧಿಪಡಿಸಲಾಗಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಉಪಕರಣದಲ್ಲಿರುವ ವಿಶೇಷ ಕ್ಯಾಮೆರಾವು ಕಣ್ಣಿನ ಪಾಪೆಯ ದೃಶ್ಯವನ್ನು ವೈದ್ಯಲೋಕಕ್ಕೆ ಅನುಕೂಲವಾಗುವಂತೆ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ಅದರ ಮೂಲಕ ಕಣ್ಣಿನ ಪೋಟೊ ಕ್ಲಿಕ್ಕಿಸಿದರೆ ಸಾಕು. ಅದನ್ನು ಆಧಾರವಾಗಿಟ್ಟುಕೊಂಡು ಕಣ್ಣಿನಲ್ಲಿ ಉಂಟಾಗಿರುವ ದೋಷವನ್ನು ಈ ಉಪಕರಣ ಪತ್ತೆ ಹಚ್ಚುತ್ತದೆ ಹಾಗೂ ಅದಕ್ಕೆ ತೆಗೆದುಕೊಳ್ಳಬೇಕಿರುವ ಚಿಕಿತ್ಸೆಯ ಬಗ್ಗೆಯೂ ಮಾಹಿತಿ ನೀಡುತ್ತದೆ.

ಮಧುಮೇಹ ಇರುವ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ‘ರೆಟಿನೋಪತಿ’ ಎಂಬ ರೋಗವನ್ನೂ ಹೈಕ್ವಾಲಿಟಿ ಫೋಟೊಗಳ ಮೂಲಕ ಕಂಡುಹಿಡಿಯಲು ಈ ಉಪಕರಣ ಶಕ್ತವಾಗಿದೆ. ಈ ತಂತ್ರಜ್ಞಾನವನ್ನು ಉಪಯೋಗಿಸಿ ಪ್ರಾಯೋಗಿಕವಾಗಿ 90ಕ್ಕೂ ಹೆಚ್ಚು ಮಧುಮೇಹಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಶೇ 90ರಷ್ಟು ಮಂದಿಗೆ ‘ರೆಟಿನೊಪತಿ’ ಸಮಸ್ಯೆ ಇರುವುದನ್ನು ಐಡಿಎಕ್ಸ್‌ ಡಾಕ್ಟರ್‌

ಪತ್ತೆ ಹಚ್ಚಿದೆ.

ತಜ್ಞ ವೈದ್ಯರಿಗೆ ಪರ್ಯಾಯವಾಗಿ ಈ ತಂತ್ರಾಂಶವನ್ನು ವೈದ್ಯಕೀಯ ಜ್ಞಾನವಿರುವ ಸಾಮಾನ್ಯ ಶುಶ್ರೂಷಕಿಯರೂ ಉಪಯೋಗಿಸಬಹುದಾಗಿದೆ ಎಂದು ಐಡಿಎಕ್ಸ್‌ ಡಾಕ್ಟರ್‌ನ ಸ್ಥಾಪಕ ಮೈಕಲ್‌ ಅಂಬ್ರಾಪ್‌ ತಿಳಿಸಿದ್ದಾರೆ. ಅಮೆರಿಕದ ಆಹಾರ ಮತ್ತು ಔಷಧ ಇಲಾಖೆಯೂ ಐಡಿಎಕ್ಸ್‌–ಡಾಕ್ಟರ್‌ ತಂತ್ರಜ್ಞಾನಕ್ಕೆ ಹಸಿರು ನಿಶಾನೆ ತೋರಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry