ಶನಿವಾರ, ಫೆಬ್ರವರಿ 27, 2021
21 °C

ಕರಿಷ್ಮಾ– ಕರೀನಾ ಸ್ವಭಾವ ಹೇಗಿದೆ ಗೊತ್ತಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಿಷ್ಮಾ– ಕರೀನಾ ಸ್ವಭಾವ ಹೇಗಿದೆ ಗೊತ್ತಾ?

ಕರಿಷ್ಮಾ ಕಪೂರ್‌ ಮತ್ತು ಕರೀನಾ ಕಪೂರ್‌ ಬಾಲಿವುಡ್‌ನ ಜನಪ್ರಿಯ ಸ್ಟಾರ್‌ ನಟಿಯರಾಗಿ ಮೆರೆದ ಅಕ್ಕ–ತಂಗಿ. 15 ವರ್ಷಗಳ ಹಿಂದೆ ಕರೀಷ್ಮಾ ನಂ.1 ನಟಿಯಾಗಿ ಮೆರೆದವರು. ಕರೀನಾ, ತಾಯಿಯಾದ ಮೇಲೂ ತಾರಾ ವರ್ಚಸ್ಸು ಉಳಿಸಿಕೊಂಡಿದ್ದಾರೆ. ಮದುವೆಯಾದ ಬಳಿಕ ಕರಿಷ್ಮಾ ಸಿನಿಮಾ ನಟನೆಯಿಂದ ದೂರವುಳಿದರೆ, ಕರೀನಾ ಮಗ ತೈಮೂರ್‌ ಹುಟ್ಟಿದ ಬಳಿಕ ಬ್ರೇಕ್‌ ತೆಗೆದುಕೊಂಡಿದ್ದು ಕೊಂಚ ಕಾಲ ಮಾತ್ರ. ಈಗ ‘ವೀರೆ ದಿ ವೆಡ್ಡಿಂಗ್‌’ ಸಿನಿಮಾ ಮೂಲಕ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

ಈ ಅಕ್ಕ– ತಂಗಿಯರು ಸ್ಟಾರ್‌ ನಟಿಯರಾದರೂ ಮನೆಯಲ್ಲಿ ಸಾಮಾನ್ಯ ಅಮ್ಮಂದಿರೇ. ಆದರೆ ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಇಬ್ಬರದೂ ತದ್ವಿರುದ್ಧ ಸ್ವಭಾವ. ಕರಿಷ್ಮಾ ತಮ್ಮ ಮಕ್ಕಳಾದ ಸಮೈರಾ ಹಾಗೂ ಕಿಯಾನ್‌ ರಾಜ್‌ ಅನ್ನು ಮಾಧ್ಯಮದ ಬೆಳಕಿನಿಂದ ದೂರವೇ ಇಟ್ಟು ಬೆಳೆಸುತ್ತಿದ್ದಾರೆ. ಅಲ್ಲೊಮ್ಮೆ ಇಲ್ಲೊಮ್ಮೆ ಸುದ್ದಿಯಾಗುತ್ತಾರಷ್ಟೇ. ಆದರೆ ಕರೀನಾ ಹಾಗಲ್ಲ. ಒಂದೂವರೆ ವರ್ಷದ ಮಗ ತೈಮೂರ್‌ ಈಗಾಗಲೇ ‘ಸ್ಟಾರ್‌ ಮಗು’ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದಾನೆ. ಮಗನ ಹುಟ್ಟುಹಬ್ಬ, ಅವನ ತುಂಟಾಟದ ಕ್ಷಣಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಕರೀನಾಗೆ ತುಂಬಾ ಇಷ್ಟ.

ಈಚೆಗೆ ಕರಿಷ್ಮಾ ಈ ಬಗ್ಗೆ ಮಾತನಾಡಿದ್ದು, ‘ನಾವಿಬ್ಬರೂ ಸೌಹಾರ್ದ ಸಂಬಂಧ ಹೊಂದಿದ್ದೇವೆ. ಆದರೆ ಮಕ್ಕಳ ವಿಚಾರಕ್ಕೆ ಬಂದಾಗ, ಅವರನ್ನು ಬೆಳೆಸುವ ವಿಚಾರದಲ್ಲಿ ಒಬ್ಬರಿಗೊಬ್ಬರು ತಲೆ ಹಾಕುವುದಿಲ್ಲ. ಒಬ್ಬರಿಗೊಬ್ಬರು ಅಭಿಪ್ರಾಯಗಳನ್ನು ಹೇರಿಕೊಳ್ಳುವುದಿಲ್ಲ. ಅವಳ ಮಗುವಿನ ನಿರ್ಧಾರ ಅವಳದು, ನನ್ನ ಮಕ್ಕಳ ನಿರ್ಧಾರ ನನ್ನದು’ ಎಂದಿದ್ದಾರೆ.

‘ಆದರೆ ಅಕ್ಕ– ತಂಗಿಯಾಗಿ ಸಣ್ಣ ವಯಸ್ಸಿನಲ್ಲಿ ಹೇಗೆ ಜಗಳವಾಡುತ್ತಿದ್ದೆವೋ ಹಾಗೇ ಈಗಲೂ ಜಗಳವಾಡುತ್ತೇವೆ. ಈಗಲೂ ಬಟ್ಟೆ ವಿಚಾರಕ್ಕೆ ನಮ್ಮಿಬ್ಬರ ಮಧ್ಯೆ ಜಗಳ ನಡೆಯುತ್ತದೆ! ನನ್ನ ಜೀನ್ಸ್‌ ಈಗಲೂ ಆಕೆಗೆ ಬೇಕು’ ಎಂದು ಅಕ್ಕ– ತಂಗಿಯ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.