ಶುಕ್ರವಾರ, ಮಾರ್ಚ್ 5, 2021
29 °C

ಬಾಂಬ್‌ ಸಿಡಿಸಿದ ರಾಖಿ ಸಾವಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಂಬ್‌ ಸಿಡಿಸಿದ ರಾಖಿ ಸಾವಂತ್

ಚಿತ್ರರಂಗದಲ್ಲಿ ಬಹಳ ದಿನಗಳಿಂದ ಚರ್ಚೆಯಲ್ಲಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರತಿಕ್ರಿಯಿಸಿರುವ ರಾಖಿ ಸಾವಂತ್ ಹೊಸ ಬಾಂಬ್ ಸಿಡಿಸಿದ್ದಾರೆ.

‘ಅವಕಾಶ ಪಡೆಯಲು ‘ನಿರ್ಮಾಪಕರ ಜೊತೆ ಹೋಗಿರುವ’ ಬಹಳಷ್ಟು ಹುಡುಗಿಯರನ್ನು ಚಿತ್ರರಂಗದಲ್ಲಿ ನಾನು ನೋಡಿದ್ದೇನೆ. ಬರೀ ಹುಡುಗಿಯರಷ್ಟೇ ಅಲ್ಲ ಫ್ಯಾಷನ್ ಕ್ಷೇತ್ರದಲ್ಲಿ ಹುಡುಗರೂ ಅವಕಾಶಗಳಿಗಾಗಿ ಕಾಸ್ಟಿಂಗ್ ಕೌಚ್‌ಗೆ ರಾಜಿಯಾಗಿದ್ದಾರೆ’ ಎಂದು ರಾಖಿ ಹೇಳಿದ್ದಾರೆ.

ತಾನೂ ಕಾಸ್ಟಿಂಗ್ ಕೌಚ್‌ಗೆ ಬಲಿಪಶುವಾಗಿದ್ದೆ ಎಂದು ಮುಕ್ತವಾಗಿ ಹೇಳಿಕೊಂಡಿರುವ ರಾಖಿ, ‘ಚಿತ್ರರಂಗದ ಆರಂಭಿಕ ದಿನಗಳಲ್ಲಿ ನಾನೂ ಕಾಸ್ಟಿಂಗ್ ಕೌಚ್‌ ಸಮಸ್ಯೆ ಎದುರಿಸಿದ್ದೇನೆ. ಹಾಗೆಂದು ನನ್ನ ಬಳಿ ಎಲ್ಲಾ ನಿರ್ದೇಶಕರು, ನಿರ್ಮಾಪಕರು ಹಾಗೆ ನಡೆದುಕೊಂಡಿದ್ದಾರೆಂದು ನಾನು ಹೇಳುತ್ತಿಲ್ಲ. ನನಗೆ ಗೊತ್ತಿರುವಂತೆ ಇಂಥ ಚರ್ಚೆಗಳು ಕೇವಲ ಆರಂಭಿಕ ಹಂತದವು. ಜೀವನದ ಇತರ ಕ್ಷೇತ್ರಗಳಲ್ಲಿರುವಂತೆ ಸಿನಿಮಾ ರಂಗದಲ್ಲೂ ಲೈಂಗಿಕ ಭ್ರಷ್ಟಾಚಾರವಿದೆ. ಪ್ರತಿಭೆಯನ್ನೇ ನಂಬಿಕೊಂಡಿದ್ದ ನಾನು ಕಾಸ್ಟಿಂಗ್ ಕೌಚ್‌ಅನ್ನು ಸ್ಪಷ್ಟವಾಗಿ ನಿರಾಕರಿಸಿದ್ದೆ. ಚಿತ್ರರಂಗ ಪ್ರವೇಶಿಸುವ ಹೊಸಬರು ತಾಳ್ಮೆಯಿಂದ ಇರಬೇಕು. ಯಶಸ್ಸಿಗಾಗಿ ಅಡ್ಡದಾರಿ ಹಿಡಿಯಬಾರದು’ ಎಂದು ಸಲಹೆ ನೀಡಿದ್ದಾರೆ.

ಕಾಸ್ಟಿಂಗ್ ಕೌಚ್ ಬಗ್ಗೆ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಹೇಳಿರುವ ಮಾತುಗಳಿಗೆ ನನ್ನ ಸಂಪೂರ್ಣ ಸಮ್ಮತಿ ಇದೆ ಎಂದು ಹೇಳಿರುವ ರಾಖಿ, ‘ಚಿತ್ರರಂಗದಲ್ಲಿ ಯಾರೂ ಯಾರನ್ನೂ ಅತ್ಯಾಚಾರ ಮಾಡಲಾಗದು. ಪರಸ್ಪರ ಸಮ್ಮತಿ ಇಲ್ಲವೇ ಸ್ವಯಂಪ್ರೇರಣೆಯಿಂದಲೇ ಇದೆಲ್ಲಾ ನಡೆಯುತ್ತದೆ. ಬಾಲಿವುಡ್‌ನಲ್ಲಿ ತಮ್ಮ ಕಣ್ಣೆದುರಿಗೆ ಇಂಥ ಸಂಗತಿಗಳು ನಡೆಯುತ್ತಿದ್ದರೂ ಯಾರೂ ಸತ್ಯವನ್ನು ಹೇಳಲು ಮುಂದೆ ಬರುವುದಿಲ್ಲ. ಆದರೆ, ಈ ವಿಚಾರದಲ್ಲಿ ಸರೋಜ್ ಖಾನ್ ತಮ್ಮ ಮನಸಿನ ಮಾತನ್ನೇ ಹೇ‌ಳಿದ್ದಾರೆ. ಕನಿಷ್ಠ ಈ ಮೂಲಕವಾದರೂ ಜಗತ್ತಿಗೆ ಸತ್ಯ ಏನೆಂದು ತಿಳಿಯುವಂತಾಗಿದೆ’ ಎಂದು ರಾಖಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.