35 ಸಾವಿರದಿಂದ ಕೆಳಗಿಳಿದ ಸಂವೇದಿ ಸೂಚ್ಯಂಕ

7

35 ಸಾವಿರದಿಂದ ಕೆಳಗಿಳಿದ ಸಂವೇದಿ ಸೂಚ್ಯಂಕ

Published:
Updated:
35 ಸಾವಿರದಿಂದ ಕೆಳಗಿಳಿದ ಸಂವೇದಿ ಸೂಚ್ಯಂಕ

ಮುಂಬೈ : ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಸತತ ಎರಡನೇ ವಹಿವಾಟು ದಿನದಲ್ಲಿಯೂ ಇಳಿಕೆ ಕಂಡಿದೆ.

ಆರು ವಾರಗಳ ವಹಿವಾಟು ಅವಧಿಯಲ್ಲಿಯೇ ಸೂಚ್ಯಂಕವು ಇಳಿಮುಖವಾಗಿ ವಹಿವಾಟು ಅಂತ್ಯ ಕಂಡ ಮೊದಲ ವಾರ ಇದಾಗಿದೆ.

ವಿದೇಶಿ ಬಂಡವಾಳ ಹೊರಹರಿವು ಮತ್ತು ರೂಪಾಯಿ ಮೌಲ್ಯ ಇಳಿಕೆಯ ಪರಿಣಾಮದಿಂದಾಗಿ ಸೂಚ್ಯಂಕ ಇಳಿಮುಖವಾಗಿದೆ ಎಂದು ದಲ್ಲಾಳಿಗಳು ಹೇಳಿದ್ದಾರೆ. ಬಿಎಸ್‌ಇ 188 ಅಂಶ ಇಳಿಕೆ ಕಂಡು, 34,915 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 61 ಅಂಶ ಇಳಿಕೆಯಾಗಿ 10,618 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ಗುರುವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 148 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದು, ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 579 ಕೋಟಿ ಮೌಲ್ಯದ ಷೇರು ಖರೀದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry