ಶನಿವಾರ, ಫೆಬ್ರವರಿ 27, 2021
19 °C

ಕಳಪೆ ಬೌಲಿಂಗ್‌, ಫೀಲ್ಡಿಂಗ್‌ ಸೋಲಿಗೆ ಕಾರಣ: ಸ್ಟೀಫನ್‌ ಫ್ಲೆಮಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

ಕಳಪೆ ಬೌಲಿಂಗ್‌, ಫೀಲ್ಡಿಂಗ್‌ ಸೋಲಿಗೆ ಕಾರಣ: ಸ್ಟೀಫನ್‌ ಫ್ಲೆಮಿಂಗ್‌

ಕೋಲ್ಕತ್ತ: ಕಳಪೆ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಿಂದಾಗಿ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಹೇಳಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ 6 ವಿಕೆಟ್‌ಗಳ ಅಂತರದಿಂದ ಜಯಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ್ದ ಚೆನ್ನೈ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 177 ರನ್‌ ಗಳಿಸಿತ್ತು. ಕೆಕೆಆರ್‌ ತಂಡವು 17.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 180 ರನ್‌ ಗಳಿಸಿ ಗೆದ್ದಿತ್ತು.

‘ನಮ್ಮ ತಂಡದ ಬೌಲಿಂಗ್‌ ಪರಿಣಾಮಕಾರಿಯಾಗಿರಲಿಲ್ಲ. ಉತ್ತಮ ಫೀಲ್ಡರ್‌ಗಳೇ ರನ್‌ ತಡೆಯಲು ಕಷ್ಟಪಟ್ಟರು. ಆದರೆ, ಒಂದು ಪಂದ್ಯದಲ್ಲಿ ತೋರಿದ ಕಳಪೆ ಸಾಧನೆಯಿಂದ ನಿರಾಸೆ ಹೊಂದಬೇಕಿಲ್ಲ. ಇಂದಿಗೂ ನಮ್ಮ ತಂಡ ಬಲಿಷ್ಠವಾಗಿದೆ’ ಎಂದು ಫ್ಲೆಮಿಂಗ್‌ ಹೇಳಿದ್ದಾರೆ.

‘ನಾವು ನೀಡಿದ ಗುರಿ ಸವಾಲಿನಿಂದ ಕೂಡಿತ್ತಾದರೂ ಕೋಲ್ಕತ್ತ ತಂಡವು ಉತ್ತಮ ಆರಂಭ ಮಾಡಿತು. ಕೊನೆಯ ಓವರ್‌ಗಳಲ್ಲಿ ಇನ್ನೊಂದಿಷ್ಟು ರನ್‌ಗಳನ್ನು ಕಲೆ ಹಾಕಿದ್ದರೆ 200ರ ಗಡಿ ದಾಟಬಹುದಿತ್ತು. ಆಗ, ಪಂದ್ಯದ ಮೇಲೆ ಹಿಡಿತ ಸಾಧಿಸಬಹುದಿತ್ತು’ ಎಂದು ತಿಳಿಸಿದ್ದಾರೆ.

‘ಸೋಲು ನಮ್ಮ ವೈಫಲ್ಯವನ್ನು ತೋರಿಸಿದೆ. ಮುಂದಿನ ಪಂದ್ಯಗಳಲ್ಲಿ ಅವನ್ನೆಲ್ಲ ಸರಿ ಮಾಡಿಕೊಳ್ಳಬೇಕು. ಮುಂದಿನ ಪಂದ್ಯಗಳಲ್ಲಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲು ಹೋಗುವುದಿಲ್ಲ’ ಎಂದೂ ತಿಳಿಸಿದ್ದಾರೆ.

ಗಿಲ್‌ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌: ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸಿಕ್ಕ ಅವಕಾ ಶವನ್ನು ಬಳಿಸಿಕೊಂಡ ಶುಭಮನ್‌ ಗಿಲ್‌ ತಾವೊಬ್ಬ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಕೆಕೆಆರ್‌ನ ಸ್ಪಿನ್‌ ಬೌಲರ್‌ ಪಿಯೂಷ್‌ ಚಾವ್ಲಾ ಹೇಳಿದ್ದಾರೆ.

ಆ ಪಂದ್ಯದಲ್ಲಿ ಶುಭ್‌ಮನ್‌ ಅವರು ಔಟಾಗದೆ 57 ರನ್‌ ಗಳಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.