ಶುಕ್ರವಾರ, ಮಾರ್ಚ್ 5, 2021
16 °C

‘ಯಡಿಯೂರಪ್ಪ ಮತ್ತೆ ಸಿ.ಎಂ ಆಗಲಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಯಡಿಯೂರಪ್ಪ ಮತ್ತೆ ಸಿ.ಎಂ ಆಗಲಾರ’

ಶಿವಮೊಗ್ಗ: ‘ಪ್ರಮಾಣ ವಚನ ಸ್ವೀಕರಿಸಲು ಯಡಿಯೂರಪ್ಪ ದಿನ ನಿಗದಿ ಮಾಡಿಕೊಂಡು ಬಿಟ್ಟಿದ್ದಾನೆ. ಮಿಸ್ಟರ್ ಯಡಿಯೂರಪ್ಪ... ನೀನು ಏನೇ ತಿಪ್ಪರಲಾಗ ಹಾಕಿದರೂ ಮತ್ತೆ ಈ ರಾಜ್ಯದ ಸಿ.ಎಂ ಆಗಲಾರೆ’

– ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಕಿಚಾಯಿಸಿದ ಪರಿ.

ಶಿಕಾರಿಪುರ, ಸೊರಬದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣೆ ಪ್ರಜಾಸತ್ತಾತ್ಮಕವಾಗಿ ನಡೆಯುವುದರಿಂದ ಕುಟುಂಬ ರಾಜಕಾರಣವನ್ನು ತಾವು ವಿರೋಧಿಸುವುದಿಲ್ಲ ಎಂದರು.

‘ಅಂದು ಜೈಲಿಗೆ ಹೋದವರಿಗೆ ಟಿಕೆಟ್ ನೀಡಿರುವುದನ್ನು ನೋಡಿದರೆ ಅಲಿಬಾಬ ಮತ್ತು ನಲವತ್ತು ಮಂದಿ ಕಳ್ಳರ ಕಥೆ ನೆನಪಾಗುತ್ತದೆ’ ಎಂದು ಛೇಡಿಸಿದರು.

ಮೋದಿ ಭಾಷಣದಲ್ಲಿ ಶೇ 90ರಷ್ಟು ಸುಳ್ಳುಗಳೇ ತುಂಬಿರುತ್ತವೆ. ಇತಿಹಾಸ ತಿರುಚುವುದೇ ಬಿಜೆಪಿಯ ಹವ್ಯಾಸ ಎಂದು ತಿರುಗೇಟು ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.