ಸಾವಿಗೆ ಶರಣಾದ ಆರೋಪಿ

7

ಸಾವಿಗೆ ಶರಣಾದ ಆರೋಪಿ

Published:
Updated:

ಹೈದರಾಬಾದ್: ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಗುಂಟೂರು ಜಿಲ್ಲೆಯ ದಾಚೆಪಲ್ಲಿ ಗ್ರಾಮದ ಸೈಕಲ್ ರಿಕ್ಷಾವಾಲಾ ಸುಬ್ಬಯ್ಯ (55) ಮರಕ್ಕೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಿಲ್ಲೆಯ ಗುರಜಾಲ ಮಂಡಲದ ದೈದಾದಲ್ಲಿರುವ ಅಮರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಸಮೀಪ ಸುಬ್ಬಯ್ಯ ಮೃತದೇಹ ಪತ್ತೆಯಾಗಿದೆ. ಸುಬ್ಬಯ್ಯ ಸಂಬಂಧಿಕರೊಬ್ಬರ ಜತೆ ಮಾತನಾಡಿರುವ ದೂರವಾಣಿ ಕರೆಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

‘ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ನಾನು ಹಲವರಿಗೆ ಹೇಳುತ್ತಿದ್ದೆ. ಆದರೆ ಇಂದು ನಾನು ಬಾಲಕಿ ಮೇಲೆ ಅತ್ಯಾಚಾರ ಎಸಗುವ ಹೇಯ ಕೃತ್ಯ ಮಾಡಿದ್ದೇನೆ. ಮಗನಿಗೆ ಮುಖ ತೋರಿಸಲು ನಾಚಿಕೆ ಆಗುತ್ತಿದೆ. ನನ್ನ ಪಾಪ ನನ್ನನ್ನು ಹಿಡಿದುಕೊಂಡಿದೆ. ಸಾವಿಗೆ ಹತ್ತಿರದಲ್ಲಿದ್ದೇನೆ. ನಾಳೆ ನೀವು ನನ್ನ ಮೃತದೇಹ ನೋಡುತ್ತೀರಿ’ ಎಂದು ಕರೆಯಲ್ಲಿ ಆತ ಹೇಳಿದ್ದ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು, ಆರೋಪಿಯನ್ನು ತಕ್ಷಣ ಪತ್ತೆ ಮಾಡುವಂತೆ ಆದೇಶಿಸಿದ್ದರು. ಆರೋಪಿ ಪತ್ತೆಗಾಗಿ ಪೊಲೀಸರು15 ತಂಡಗಳನ್ನು ರಚಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry