ಗುರುವಾರ , ಮಾರ್ಚ್ 4, 2021
18 °C

ತಮಿಳು ಬಿಗ್‌ಬಾಸ್ ಎರಡನೇ ಆವೃತ್ತಿ: ಕಮಲ್ ನಿರೂಪಣೆ

ಪಿಟಿಐ Updated:

ಅಕ್ಷರ ಗಾತ್ರ : | |

ತಮಿಳು ಬಿಗ್‌ಬಾಸ್ ಎರಡನೇ ಆವೃತ್ತಿ: ಕಮಲ್ ನಿರೂಪಣೆ

ಚೆನ್ನೈ: ‘ಮಕ್ಕಳ್ ನೀದಿ ಮಯ್ಯಂ’ ಪಕ್ಷ ಸ್ಥಾಪಿಸಿ ರಾಜಕೀಯ ನಾಯಕರಾಗಿರುವ ನಟ ಕಮಲ್ ಹಾಸನ್ ಅವರು ತಮಿಳು ಬಿಗ್‌ಬಾಸ್ ಎರಡನೇ ಆವೃತ್ತಿಯನ್ನು  ನಿರೂಪಿಸಲಿದ್ದಾರೆ.

‘ಪಕ್ಷದ ಕುರಿತೂ ಗಮನ ನೀಡಬೇಕಿರುವುದರಿಂದ ಅವರ ರಾಜಕೀಯ ಕೆಲಸಗಳಿಗೆ ತೊಂದರೆಯಾಗದಂತೆ ಕಾರ್ಯಕ್ರಮ ರೂಪಿಸಲಾಗಿದೆ. ಎರಡನೇ ಆವೃತ್ತಿ ಪ್ರೊಮೊ ಚಿತ್ರೀಕರಣ ಗುರುವಾರ ಪೂರ್ಣಗೊಂಡಿದೆ’ ಎಂದು ಕಮಲ್‌ಗೆ ಆಪ್ತವಾಗಿರುವ ಮೂಲ ‘ಪ್ರಜಾವಾಣಿ’ಗೆ ತಿಳಿಸಿದೆ.

ಜೂನ್‌ನಲ್ಲಿ ಎರಡನೇ ಆವೃತ್ತಿ ಪ್ರಸಾರ ಆರಂಭವಾಗುವ ಸಾಧ್ಯತೆ ಇದ್ದು ಸೆಪ್ಟೆಂಬರ್‌ವರೆಗೆ ಮುಂದುವರಿಯಬಹುದು ಎಂದು ಮೂಲಗಳು ತಿಳಿಸಿವೆ.

ಮೊದಲನೇ ಆವೃತ್ತಿ ನಿರೂಪಣೆ ವೇಳೆ, ತಮ್ಮ ರಾಜಕೀಯ ಪ್ರವೇಶಕ್ಕೆ ವೇದಿಕೆಯನ್ನು ಸಿದ್ಧ‍ಪಡಿಸಿಕೊಂಡಿದ್ದ ಕಮಲ್ ಈ ವೇಳೆ ಹಲವಾರು ಸಾಮಾಜಿಕ ವಿಷಯಗಳ ಕುರಿತು ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದರು.

ಮನೋರಂಜನಾ ಕಾರ್ಯಕ್ರಮವನ್ನು ಸಾಮಾಜಿಕ ಕಳಕಳಿ ಉಳ್ಳ ವಿಷಯಗಳ ಚರ್ಚೆಗೆ ವೇದಿಕೆಯಾಗಿ ಪರಿವರ್ತಿಸಿದ್ದ ಅವರು, ನೀಟ್, ದೇಶದ ರಾಜಕೀಯದಲ್ಲಿ ತಮಿಳುನಾಡಿನ ರಾಜಕೀಯದ ಮಹತ್ವ ಕುರಿತಂತೆ ಹಲವು ವಿಷಯಗಳ ಚರ್ಚೆ ನಡೆಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.