‘ಪ್ರಣಾಳಿಕೆಗಳಲ್ಲಿ ಮಕ್ಕಳ ಹಿತ ನಿರ್ಲಕ್ಷ

7

‘ಪ್ರಣಾಳಿಕೆಗಳಲ್ಲಿ ಮಕ್ಕಳ ಹಿತ ನಿರ್ಲಕ್ಷ

Published:
Updated:

ಬೆಂಗಳೂರು: ‘ವಿಧಾನಸಭೆ ಚುನಾವಣೆಗೆ ಮುನ್ನ ವಿವಿಧ ಪಕ್ಷಗಳು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಮಕ್ಕಳ ಹಿತವನ್ನು ನಿರ್ಲಕ್ಷಿಸಲಾಗಿದೆ’ ಎಂದು ಕ್ರಿಸ್ಪ್‌ (ಸಿಆರ್‌ಐಎಸ್‌ಪಿ) ಸರ್ಕಾರೇತರ ಸಂಸ್ಥೆ ಆರೋಪಿಸಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕುಮಾರ ಜಹಗೀರ್‌ದಾರ್‌ ಮಾತನಾಡಿ, ‘ಮಕ್ಕಳ ಮೇಲಿನ ದೌರ್ಜನ್ಯ, ಮಾನಸಿಕ ಒತ್ತಡ, ಅರ್ಧದಲ್ಲಿಯೇ ಶಾಲೆ ಬಿಡುವ ಪ್ರಕರಣಗಳು ಹೆಚ್ಚುತ್ತಿವೆ. ಆದರೂ ಯಾವುದೇ ಪಕ್ಷಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ರಾಜ್ಯದ ಪ್ರಮುಖ ಪಕ್ಷಗಳ ಪ್ರಣಾಳಿಕೆಯಲ್ಲಿಯೂ ಮಕ್ಕಳ ಹಿತ ಕಾಯುವ ಅಂಶಗಳು ಇಲ್ಲ’ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry