ಚೂರಿ ತಂದ ನಾರಿಗೆ ನ್ಯಾಯಾಂಗ ಬಂಧನ

7

ಚೂರಿ ತಂದ ನಾರಿಗೆ ನ್ಯಾಯಾಂಗ ಬಂಧನ

Published:
Updated:

ಬೆಂಗಳೂರು: ಚಾಕು ಬಚ್ಚಿಟ್ಟುಕೊಂಡು ಲೋಕಾಯುಕ್ತ ಕಚೇರಿಗೆ ಬಂದಿದ್ದ ವಿಜಯನಗರ ಹೊಸಳ್ಳಿಯ ಸೋನು (57) ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಐಪಿಸಿ ಕಲಂ 452 (ಅತಿಕ್ರಮ ಪ್ರವೇಶ) ಹಾಗೂ 353ರ(ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ )ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋನು ಅವರನ್ನು ಪೊಲೀಸರು 8ನೇ ಎಸಿಎಮ್‌ಎಮ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಗುರುವಾರ ಘಟನೆಯ ಬಳಿಕ ಪೊಲೀಸರ ಪ್ರಶ್ನೆಗಳಿಗೆ ಅಸಂಬದ್ಧವಾಗಿ ಉತ್ತರ ನೀಡಿದ ಮಹಿಳೆ  ‘ನಾನು ವಿಜಯನಗರದ ನಿವಾಸಿ, ರಾಜೀವ್‌ ಗಾಂಧಿ ನನ್ನ ಪತಿ’ ಎಂದು ಹೇಳಿದ್ದಳು. ಹೀಗಾಗಿ ಆಕೆ ಮಾನಸಿಕ ಅಸ್ವಸ್ಥೆ ಇರಬಹುದು ಎಂದು ಶಂಕಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry