‘ಮತದಾನ ಮಾಡದೆ ಪ್ರಶ್ನಿಸುವ ಹಕ್ಕಿಲ್ಲ’

7

‘ಮತದಾನ ಮಾಡದೆ ಪ್ರಶ್ನಿಸುವ ಹಕ್ಕಿಲ್ಲ’

Published:
Updated:

ದೇವನಹಳ್ಳಿ: ಮತದಾರ ಮತದಾನ ಮಾಡದೇ ಇದ್ದರೆ ಸಮಾಜದಲ್ಲಿ ತಪ್ಪು ನಡೆದಾಗ ಪ್ರಶ್ನೆ ಮಾಡುವ ನೈತಿಕ ಹಕ್ಕು ಕಳೆದುಕೊಳ್ಳುತ್ತಾನೆ ಎಂದು ಭಾರತ ಜನಜಾಗೃತಿ ಸೇನೆ ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷ ಸಿ.ಮುನಿಯಪ್ಪ ತಿಳಿಸಿದರು.

ದೇವನಹಳ್ಳಿ ಪುರಸಭೆ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ  ಅವರು ಮಾತನಾಡಿದರು.

‘ನಾವು ಆಯ್ಕೆ ಮಾಡುವ ವ್ಯಕ್ತಿ ಆಡಳಿತದಲ್ಲಿ ತೆಗೆದುಕೊಳ್ಳುವ ಪ್ರತಿ ನಿರ್ಧಾರ ಮತದಾರರ ಬದುಕನ್ನು ಅವಲಂಬಿಸಿರುತ್ತದೆ. ಆಸೆ ಆಮಿಷಗಳು ವಿವಿಧ ರೂಪದಲ್ಲಿ ಬರುತ್ತದೆ. ಅದಕ್ಕೆ ಒಳಗಾಗಿ ಮತ ನೀಡಿದರೆ ಭ್ರಷ್ಟಾಚಾರಕ್ಕೆ, ಸ್ವಜನ ಪಕ್ಷಾಪಾತಕ್ಕೆ ನಾವೇ ಬೆಂಬಲ ನೀಡಿದರೆ ಆಯ್ಕೆಗೊಳ್ಳುವ ಜನಪ್ರತಿನಿಧಿಗಳು ಮತ್ತು ಆತನ ಪಕ್ಷ ಮತದಾರನನ್ನು ನಿರ್ಲಕ್ಷಿಸುತ್ತವೆ’ ಎಂದರು.

12 ರಂದು ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಜ್ಞಾವಂತ ಮತದಾರರು ರಾಜ್ಯ ಅಭಿವೃದ್ಧಿಗೆ ಸ್ಪಂದಿಸುವಂತಹ ಯೋಗ್ಯವಾದ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಹಾಕಬೇಕು ಎಂದರು. ಭೂಮಾಫಿಯ, ಅಪರಾಧ ಚಟುವಟಿಕೆ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ, ಅಮಾಯಕರ ಭೂಕಬಳಿಕೆ ಮತ್ತು ಮಹಿಳೆಯರನ್ನು ಅತ್ಯಾಚಾರ ಮಾಡಿ ಆರೋಪಿಗಳಾಗಿರುವ ಪಕ್ಷದ ಅಭ್ಯರ್ಥಿಗಳನ್ನು ಮತದಾರರು ತಿರಸ್ಕರಿಸಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry