ಸೋಮವಾರ, ಮಾರ್ಚ್ 8, 2021
25 °C

ಶ್ರೀರಾಮುಲು ಪರ ಪ್ರಚಾರ ಮಾಡುವುದಿಲ್ಲ: ಸುದೀಪ್ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಾಮುಲು ಪರ ಪ್ರಚಾರ ಮಾಡುವುದಿಲ್ಲ: ಸುದೀಪ್ ಸ್ಪಷ್ಟನೆ

ಬೆಂಗಳೂರು: ಬಾದಾಮಿಯ ಬಿಜೆಪಿ ಅಭ್ಯರ್ಥಿ ಶೀರಾಮುಲು ಪರವಾಗಿ ನಟ ಸುದೀಪ್ ಪ್ರಚಾರ ಕೈಗೊಳ್ಳಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಸುದೀಪ್ ಅವರು ಶ್ರೀರಾಮುಲು ವಿರುದ್ಧ ಪ್ರಚಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

ಈ ಬಗ್ಗೆ ಟ್ವೀಟ್ ಸುದೀಪ್ ಅವರು,  ನಾನು ಶ್ರೀರಾಮುಲು ಅವರ ಪರ ಪ್ರಚಾರ ಕೈಗೊಳ್ಳುತ್ತೇನೆ ಎಂಬ ವಿಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಶ್ರೀರಾಮುಲು ಅವರು ನನಗೆ ಬಹಳ ವರ್ಷಗಳಿಂದ ಗೊತ್ತಿರುವ ವ್ಯಕ್ತಿ. ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸುತ್ತೇನೆ ಎಂದಿದ್ದಾರೆ.

ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿರುವ ಬಗ್ಗೆ ನಾನು ಮಾಧ್ಯಮದವರ ಬಳಿ ಕ್ಷಮೆಯಾಚಿಸುತ್ತೇನೆ. ಈ ಬಗ್ಗೆ  ಮಾಧ್ಯಮಗಳು ಪೂರ್ವ–ಪರ ವಿಚಾರಿಸಿಕೊಂಡು ಸುದ್ದಿ ಬಿತ್ತರಿಸಿದರೆ ಎಲ್ಲರಿಗೂ ಒಳ್ಳೆಯದಾಗಲಿದೆ, ಯಾವಾಗಲೂ ಎಲ್ಲರ ಮೇಲೂ ಪ್ರೀತಿ ಇರಲಿದೆ ಎಂದು  ಟ್ವೀಟ್ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.