7

ಜಾರ್ಖಂಡ್: ಬಾಲಕಿ ಮೇಲೆ ಅತ್ಯಾಚಾರ ಎಸಗಿದ 14 ಆರೋಪಿಗಳ ಬಂಧನ

Published:
Updated:
ಜಾರ್ಖಂಡ್: ಬಾಲಕಿ ಮೇಲೆ ಅತ್ಯಾಚಾರ ಎಸಗಿದ 14 ಆರೋಪಿಗಳ ಬಂಧನ

ರಾಂಚಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆಯ ಕುಟುಂಬದ ಸದಸ್ಯರ ಎದುರೇ ಸಜೀವ ದಹನ ಮಾಡಿದ 14 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ 160 ಕಿ.ಮೀ. ದೂರವಿರುವ ಛಾತ್ರಾ ಜಿಲ್ಲೆಯ ರಾಜಾತೆಂಡುಹ ಗ್ರಾಮದಲ್ಲಿ ಶುಕ್ರವಾರ ಈ ಅಮಾನವೀಯ ಘಟನೆ ನಡೆದಿತ್ತು.

ಈ ಭೀಕರ ಘಟನೆಯನ್ನು ಖಂಡಿಸಿದ ಮುಖ್ಯಮಂತ್ರಿ ರಘುಬಾರ್ ದಾಸ್ ಅವರು, ಛಾತ್ರಾದಲ್ಲಿ ನಡೆದಿರುವ ಈ ಘಟನೆ ನನಗೆ ನೋವನ್ನುಂಟು ಮಾಡಿದೆ. ನಾಗರಿಕ ಸಮಾಜದಲ್ಲಿ ಇಂತಹ ದುಷ್ಕೃತ್ಯಗಳಿಗೆ ಅವಕಾಶವಿಲ್ಲ. ತಪ್ಪತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ತಪ್ಪಿತಸ್ಥರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ...

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಪೋಷಕರ ಎದುರೇ ಜೀವಂತ ದಹನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry