ಶಾರ್ಟ್ ಸರ್ಕಿಟ್: ಆಸ್ಪತ್ರೆ ಸುಟ್ಟುಹೋದ ವೈರಿಂಗ್‌

7

ಶಾರ್ಟ್ ಸರ್ಕಿಟ್: ಆಸ್ಪತ್ರೆ ಸುಟ್ಟುಹೋದ ವೈರಿಂಗ್‌

Published:
Updated:

ಇಳಕಲ್: ಪಟ್ಟಣದ ಡಾ.ಪವನ್ ಧರಕ್ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಶಾರ್ಟ್ ಸರ್ಕಿಟ್‌ನಿಂದಾಗಿ ವಿದ್ಯುತ್ ಅವಘಡ ಸಂಭವಿಸಿದೆ.

ಈ ವೇಳೆ ಆಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆಗೆ ದಾಖಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಅವಘಡದಿಂದ ಆಸ್ಪತ್ರೆಯ ವಿದ್ಯುತ್ ಸಂಪರ್ಕದ ವೈರಿಂಗ್ ವ್ಯವಸ್ಥೆ ಸಂಪೂರ್ಣ ಸುಟ್ಟು ಹೋಗಿದೆ.

ಪಟಾಕಿ ಸಿಡಿದಂತೆ ಭಾಸ: ಶಾರ್ಟ್‌ ಸರ್ಕಿಟ್‌ನಿಂದ ಸಂಜೆ ಏಕಾಏಕಿ ವೈರ್, ವಿದ್ಯುತ್ ಬೋರ್ಡ್‌ಗಳು, ಸ್ವಿಚ್‌ಗಳು ಬೆಂಕಿ ಹೊತ್ತಿಕೊಂಡು ಉರಿದು ಹೋಗಿದ್ದು, ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿದಂತೆ ಭಾಸವಾಗಿದೆ. ಇದರಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಕ್ಕಳು ಹಾಗೂ ಪೋಷಕರು ಹೆದರಿ ಕಿರುಚಿಕೊಂಡಿದ್ದಾರೆ. ಹೊರಗೆ ಓಡಿ ಬಂದಿದ್ದಾರೆ. ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಓಡಾಡುವರು ಈ ಅನಿರೀಕ್ಷಿತ ಘಟನೆಯನ್ನು ದಿಗಿಲಿನಿಂದ ನೋಡಿದ್ದಾರೆ.

ಘಟನೆಯ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಕ್ಕಳನ್ನು ವಿದ್ಯುತ್ ಅವಘಡದ ನಂತರ ನಗರದ ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry