ಡೆಹ್ರಾಡೂನ್: ಸ್ಟ್ರೆಚರ್ ಸಿಗದ ಕಾರಣ ಅನಾರೋಗ್ಯದಿಂದ ನರಳುತ್ತಿದ್ದ ಸಹೋದರನನ್ನು ಬೆನ್ನ ಮೇಲೆ ಹೊತ್ತೊಯ್ದ ವ್ಯಕ್ತಿ

7
ಆಸ್ಪತ್ರೆ ಆಡಳಿತ ಮಂಡಳಿಗ ಮುಖ್ಯಮಂತ್ರಿ ಎಚ್ಚರಿಕೆ

ಡೆಹ್ರಾಡೂನ್: ಸ್ಟ್ರೆಚರ್ ಸಿಗದ ಕಾರಣ ಅನಾರೋಗ್ಯದಿಂದ ನರಳುತ್ತಿದ್ದ ಸಹೋದರನನ್ನು ಬೆನ್ನ ಮೇಲೆ ಹೊತ್ತೊಯ್ದ ವ್ಯಕ್ತಿ

Published:
Updated:
ಡೆಹ್ರಾಡೂನ್: ಸ್ಟ್ರೆಚರ್ ಸಿಗದ ಕಾರಣ ಅನಾರೋಗ್ಯದಿಂದ ನರಳುತ್ತಿದ್ದ ಸಹೋದರನನ್ನು ಬೆನ್ನ ಮೇಲೆ ಹೊತ್ತೊಯ್ದ ವ್ಯಕ್ತಿ

ಡೆಹ್ರಾಡೂನ್: ಇಲ್ಲಿನ ಆಸ್ಪತ್ರೆಯಲ್ಲಿ ಸ್ಟ್ರೆಚರ್ ನೀಡಲು ನಿರಾಕರಿಸಿದ ಕಾರಣ ಅನಾರೋಗ್ಯದಿಂದ ನರಳುತ್ತಿದ್ದ ಸಹೋದರನನ್ನು ಬೆನ್ನ ಮೇಲೆ ಹೊತ್ತೊಯ್ದ ಘಟನೆ ಶುಕ್ರವಾರ ನಡೆದಿದೆ.

ಈ ಸಂಬಂಧದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಹೋದರನನ್ನು ಆಸ್ಪತ್ರೆಗೆ ಕರೆತಂದ ವ್ಯಕ್ತಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯ ಸಿಬ್ಬಂದಿ ಸ್ಟ್ರೆಚರ್ ಕೊಡಲು ನಿರಾಕರಿಸಿದ್ದಾರೆ. ಆದ ಕಾರಣ ಆತ ತನ್ನ ಸಹೋದರನನ್ನು ಹೆಗಲ ಮೇಲೆ ಹೊತ್ತು ನಡೆದಿದ್ದಾನೆ ಎಂದು ತಿಳಿದು ಬಂದಿದೆ.

ಈ ಘಟನೆಯ ಬಗ್ಗೆ ತಿಳಿದ ಮುಖ್ಯಮಂತ್ರಿ ತ್ರಿವೇಂದರ್ ಸಿಂಗ್ ಆಸ್ಪತ್ರೆಯ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ ಹಾಗೂ ಈ ಬಗ್ಗೆ ವರದಿ ಸಲ್ಲಿಸುವಂತೆ ಆರೋಗ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry