ತಿಜೋರಿ, ಮಂಚದ ಕೆಳಗೆ, ಬಾತ್‌ ರೂಮ್ ಒಳಗೆ ದುಡ್ಡು ಬಚ್ಚಿಟ್ಟವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ: ಮೋದಿ

7

ತಿಜೋರಿ, ಮಂಚದ ಕೆಳಗೆ, ಬಾತ್‌ ರೂಮ್ ಒಳಗೆ ದುಡ್ಡು ಬಚ್ಚಿಟ್ಟವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ: ಮೋದಿ

Published:
Updated:
ತಿಜೋರಿ, ಮಂಚದ ಕೆಳಗೆ, ಬಾತ್‌ ರೂಮ್ ಒಳಗೆ ದುಡ್ಡು ಬಚ್ಚಿಟ್ಟವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ: ಮೋದಿ

ಶಿವಮೊಗ್ಗ: ಕೋಟಿ, ಕೋಟಿ ದುಡ್ಡು ತಿಜೋರಿಯಲ್ಲಿಟ್ಟವರು ನಿಮಗೆ ಒಳ್ಳೆದು ಮಾಡುತ್ತಾರೆ ಎಂಬ ನಂಬಿಕೆ ಇದೆಯೇ? 2008ರಲ್ಲಿ ₹75 ಕೋಟಿ ಇದ್ದ ಆಸ್ತಿ 2017ರಲ್ಲಿ ₹800 ಕೋಟಿ ಆಗಿದೆ ಎಂದು ಕಾಂಗ್ರೆಸ್‌ನವರೊಬ್ಬರು ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದು ಯಾರ ದುಡ್ಡು? ಪ್ರಶ್ನಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮಾಡಿದರು.

ಶಿವಮೊಗ್ಗದ ಎನ್‌ಇಎಸ್‌ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ನವರು ಲೆಕ್ಕ ಇಟ್ಟಿಲ್ಲ, ಕೊಟ್ಟಿಲ್ಲ. ಕೇವಲ ಸುಳ್ಳು ಹೇಳುವುದೇ ಅವರ ಕೆಲಸ. ಮರಳು ಮಾಫಿಯಾ ಯಾರದ್ದು? ಯಾರು ಇದನ್ನು ರಕ್ಷಿಸುವವರು ಎಂದು ಕಾಂಗ್ರೆಸ್‌ನವರನ್ನು ಪ್ರಶ್ನಿಸಿ. ನದಿ ನಿಮ್ಮದು, ಮರಳು ನಿಮ್ಮದು, ಇದರ ನಿಜವಾದ ಮಾಲೀಕರು ನೀವು. ಆದರೆ, ಒಂದು ಮುಷ್ಟಿ ಮರಳು ತೆಗೆಯಬೇಕಾದರೆ ಯಾರ ಅನುಮತಿ ಬೇಕು? ಎಂದು ಕೇಳಿದರು.

ಕಾಂಗ್ರೆಸ್, ಕರಪ್ಷನ್ (ಭ್ರಷ್ಟಾಚಾರ) ಎರಡರ ಮೊದಲ ಅಕ್ಷರ ಒಂದೇ. ನೋಟು ರದ್ದತಿಯಿಂದ ತೊಂದರೆಯಾಯಿತೆಂದು ಕಾಂಗ್ರೆಸ್ ಆರೋಪ ಮಾಡಿತ್ತು. ಆದರೆ, ಕೋಟಿಗಟ್ಟಲೆ ದುಡ್ಡು ಎಲ್ಲಿ ಇಡಲಾಗಿತ್ತೆಂಬುದು ಬಯಲಿಗೆ ಬಂತು. ಕೋಟಿ, ಕೋಟಿ ದುಡ್ಡು ತಿಜೋರಿಯಲ್ಲಿಟ್ಟವರು ನಿಮಗೆ ಒಳ್ಳೆದು ಮಾಡುತ್ತಾರೆ ಎಂಬ ನಂಬಿಕೆ ಇದೆಯೇ? 2008ರಲ್ಲಿ ₹75 ಕೋಟಿ ಇದ್ದ ಆಸ್ತಿ 2017ರಲ್ಲಿ ₹800 ಕೋಟಿ ಆಗಿದೆ ಎಂದು ಕಾಂಗ್ರೆಸ್‌ನವರೊಬ್ಬರು ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದು ಯಾರ ದುಡ್ಡು? ಪ್ರಶ್ನಿಸಿ ಎಂದು ಮೋದಿ ಕರೆ ನೀಡಿದರು.

ಮೋದಿಯವರು ಎಷ್ಟು ಕಷ್ಟಪಟ್ಟರೂ ಸಹ ವಿಧಾನಸಭೆಗೆ ಕಳ್ಳರನ್ನು ಹೋಗಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳ್ತಾರೆ. ಬೀರುವಿನೊಳಗೆ, ಮಂಚದ ಕೆಳಗೆ, ಬಾತ್‌ ರೂಮ್ ಗೋಡೆ ಒಳಗೆ ದುಡ್ಡು ಬಚ್ಚಿಟ್ಟವರಿಗೆ ನೀವೇ ಟಿಕೆಟ್ ನೀಡಿದ್ದು. ಅವರ ಬಗ್ಗೆ ಹೇಳಿ ಸ್ವಾಮೀ... ಎಂದು ಮೋದಿ ಪ್ರಶ್ನಿಸಿದರು.

‘ತುಂಗಾ ಪಾನಂ ಗಂಗಾ ಸ್ನಾನಂ’ ಎಂಬ ಮಾತಿದೆ. ಕಾಂಗ್ರೆಸ್‌ನವರು ಗಂಗೆಗೆ, ತುಂಗೆಗೂ ಗೌರವ ಕೊಡಲಿಲ್ಲ. ಖನಿಜವನ್ನು ಲೂಟಿ ಮಾಡಿರುವವರ ಬಗ್ಗೆ ಯಾಕೆ ಪ್ರೀತಿ ತೋರಿಸ್ತೀರಿ ಎಂಬುದನ್ನು ಜನರಿಗೆ ತಿಳಿಸಿ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry