ಇದೇ 8ಕ್ಕೆ ವಿಜಯಪುರಕ್ಕೆ ಮೋದಿ – ಸೋನಿಯಾ

7

ಇದೇ 8ಕ್ಕೆ ವಿಜಯಪುರಕ್ಕೆ ಮೋದಿ – ಸೋನಿಯಾ

Published:
Updated:
ಇದೇ 8ಕ್ಕೆ ವಿಜಯಪುರಕ್ಕೆ ಮೋದಿ – ಸೋನಿಯಾ

ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ವಿಜಯಪುರ ಜಿಲ್ಲೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮೇ 8ರಂದು (ಮಂಗಳವಾರ) ಬರಲಿದ್ದಾರೆ. ಇಬ್ಬರೂ ನಾಯಕರು ಒಂದೇ ದಿನ ಜಿಲ್ಲೆಗೆ ಭೇಟಿ ನೀಡುತ್ತಿರುವುದು ವಿಶೇಷ.

ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ವಿಜಯಪುರ ನಗರದಿಂದ 10 ಕಿ.ಮೀ. ದೂರದಲ್ಲಿರುವ ಸಾರವಾಡ ಗ್ರಾಮದಲ್ಲಿ ಬಿಜೆಪಿ ಸಮಾವೇಶ ಬೆಳಿಗ್ಗೆ 11ಕ್ಕೆ ನಡೆಯಲಿದ್ದು, ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ನರೇಂದ್ರ ಮೋದಿ ಮತ ಯಾಚಿಸಲಿದ್ದಾರೆ.

‘ರಾಜ್ಯದ ಚುನಾವಣೆ ಪ್ರಚಾರಕ್ಕಾಗಿ ವಿಜಯಪುರ ಜಿಲ್ಲೆಗಷ್ಟೇ ಸೋನಿಯಾ ಗಾಂಧಿ ಭೇಟಿ ನೀಡುತ್ತಿರುವುದು ವಿಶೇಷ. ವಿಜಯಪುರ ನಗರದಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿದೆ. ಮಧ್ಯಾಹ್ನ 3ಕ್ಕೆ ಸೋನಿಯಾ ಜನಸ್ತೋಮವನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ’ ಎಂದು ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಬಿ.ಪಾಟೀಲ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry