ರಾಯರಡ್ಡಿಗೆ ಟ್ಯೂಷನ್ ಹೇಳುವೆ: ಹಾಲಪ್ಪ

7

ರಾಯರಡ್ಡಿಗೆ ಟ್ಯೂಷನ್ ಹೇಳುವೆ: ಹಾಲಪ್ಪ

Published:
Updated:

ಯಲಬುರ್ಗಾ: ಬಿಜೆಪಿಯವರಿಗೆ ನೀರಾವರಿ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳುತ್ತಿರುವ ಬಸವರಾಜ ರಾಯರಡ್ಡಿ ಅವರಿಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಟ್ಯೂಷನ್ ಹೇಳುತ್ತೇನೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಲಪ್ಪ ಆಚಾರ ಹೇಳಿದರು.

ತಾಲ್ಲೂಕಿನ ಹುಲೇಗುಡ್ಡ ಗ್ರಾಮದಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೊಪ್ಪಳ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು ಬಿಜೆಪಿ ಸರ್ಕಾರ ಎಂಬುದನ್ನು ಮರೆತು ಮಾತನಾಡುತ್ತಿರುವ ರಾಯರಡ್ಡಿ ಅವರು ಕೂಡಲಸಂಗಮದಲ್ಲಿ ನೀರು ತರುವುದಾಗಿ ಆಣೆ ಪ್ರಮಾಣ ಮಾಡಿದ್ದನ್ನು ನೆನಪಿಸಿಕೊಂಡರೆ ಒಳ್ಳೆಯದು ಎಂದರು.

ಮುಖಂಡ ಬಸಲಿಂಗಪ್ಪ ಭೂತೆ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ವಾಲ್ಮೀಕಿ ಸಮಾಜದ ನಾಯಕ ಬಿ.ಶ್ರೀರಾಮುಲು ಅವರು ಉಪಮುಖ್ಯಮಂತ್ರಿಯಾಗುತ್ತಾರೆ. ಹೀಗಾಗಿ ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಶಂಕರರಾವ್ ದೇಸಾಯಿ ಮಾತನಾಡಿ, ರಾಯರಡ್ಡಿ ಅವರ ದುರಾಡಳಿತದಿಂದ ಇಲ್ಲಿಯ ಜನರು ಗುಳೆ ಹೊರಟಿದ್ದಾರೆ ಎಂದರು.

ಮುಖಂಡ ರಸೂಲಸಾಬ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ಹಂಚ್ಯಾಳಪ್ಪ ತಳವಾರ, ರುದ್ರಪ್ಪ ನಡೂಲಮನಿ, ಸಂಗಮೇಶ ವಾದಿ, ರವಿ ಕಲಬುರ್ಗಿ, ಶಿವು ಶ್ಯಾಗೋಟಿ, ಸಿ.ಎಚ್‌. ಪಾಟೀಲ, ಸಿ.ಎಚ್‌.ಬನಪ್ಪಗೌಡ್ರ, ಶಂಕ್ರಗೌಡ್ರ ಗೆದಗೇರಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry