ಕೊಟ್ಟಗಾಳು ಗ್ರಾಮದಲ್ಲಿ ಜೆಡಿಎಸ್‌ ಪರ ಪ್ರಚಾರ

7

ಕೊಟ್ಟಗಾಳು ಗ್ರಾಮದಲ್ಲಿ ಜೆಡಿಎಸ್‌ ಪರ ಪ್ರಚಾರ

Published:
Updated:

ಕನಕಪುರ: ರಾಜ್ಯದಲ್ಲಿ ಕುಮಾರಸ್ವಾಮಿ ಹೊರತುಪಡಿಸಿ ಬೇರೆ ಯಾರಿಂದಲೂ ಜನಪರ ಕಾರ್ಯಕ್ರಮ ಕೊಡಲು ಸಾಧ್ಯ ಇಲ್ಲ ಎಂದು ಕೊಟ್ಟಗಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೊಲ್ಲಹಳ್ಳಿ ಸುರೇಶ್‌ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕೊಟ್ಟಗಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲಹಳ್ಳಿ, ದೊಂಬರದೊಡ್ಡಿ ಗ್ರಾಮದಲ್ಲಿ ಜೆಡಿಎಸ್‌ ಪರ ಮತ ಯಾಚಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಜೆಡಿಎಸ್‌ ಪರ ಅಲೆ ಇದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಈ ನಾಡಿನ ಜನರ ಪರವಾಗಿ ಆಡಳಿತ ನಡೆಸಲಿದ್ದಾರೆ ಎಂದರು.

‌ಎಪಿಎಂಸಿ ಸದಸ್ಯ ದೇವುರಾವ್‌ ಜಾಧವ್‌ ಮಾತನಾಡಿ, ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರ ಪ್ರತಿನಿಧಿಸಿದ ಮೇಲೆ ಜಿಲ್ಲೆಯನ್ನಾಗಿ ಮಾಡಿ ನಾಲ್ಕು ತಾಲ್ಲೂಕುಗಳ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ

ಎಂದರು.

ಜೆಡಿಎಸ್ ನೀಡಿರುವ ಪ್ರಣಾಳಿಕೆಯನ್ನು ಬೇರೆ ಯಾವ ಮುಖ್ಯಮಂತ್ರಿಯಿಂದಲೂ ಕೊಡಲು ಸಾಧ್ಯವಿಲ್ಲ. ಮೇ 15ರ ಫಲಿತಾಂಶದಲ್ಲಿ ಜೆಡಿಎಸ್‌ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುದುವಾಡಿ ನಾಗರಾಜು, ದೊಡ್ಡಕಲ್‌ಬಾಳ್‌ ಮಹದೇವು, ಆರತಿಪಾಳ್ಯ ಮಾದೇಶ್‌, ಗೂಗರೆದೊಡ್ಡಿ ಶಿವಕುಮಾರ್‌, ಬಂಡಿಗನಹಳ್ಳಿ ನಾಗೇಶ್‌, ಕಲ್ಬಾಲ್‌ ಲಕ್ಷ್ಮಣ್‌, ಕೊಟ್ಟಗಾಳ್‌ ಮಾರೇಗೌಡ (ಮಾನಿ), ಉಮೇಶ್‌, ಭದ್ರೇಗೌಡನದೊಡ್ಡಿ ಪುಟ್ಟಸ್ವಾಮಿ, ಪಿಚ್ಚನಕೆರೆ ಪುಟ್ಟಮಾದಯ್ಯ, ಶ್ರೀನಿವಾಸ್‌, ಗೂಗರೆದೊಡ್ಡಿ ಕುಮಾರ್‌, ಪಿಚ್ಚನಕೆರೆ ಪುಟ್ಟಮಾದಯ್ಯ, ಕೊಟ್ಟಗಾಳು ಚಂದ್ರು, ಆನಂದ, ರಾಜು, ಕುಮಾರ್‌, ದೊಡ್ಡಕಲ್‌ಬಾಳ್‌ ರವಿ, ಸಿದ್ದೇಶ, ಸುನಿಲ್‌, ಮಧು, ಸಿಂಗಸಂದ್ರ ಜಯರಾಮು ಸೇರಿದಂತೆ ಅನೇಕರು ಪ್ರಚಾರ‌ದಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry