ಮಂಗಳವಾರ, ಮಾರ್ಚ್ 9, 2021
18 °C
ಗೃಹ ಸಚಿವ ರಾಮಲಿಂಗಾರೆಡ್ಡಿ

‘ಮೋದಿ ಮಾತಿಗೆ ಗ್ಯಾರಂಟಿಯೂ ಇಲ್ಲ, ವಾರಂಟಿಯೂ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೋದಿ ಮಾತಿಗೆ ಗ್ಯಾರಂಟಿಯೂ ಇಲ್ಲ, ವಾರಂಟಿಯೂ ಇಲ್ಲ’

ಬೆಂಗಳೂರು: ‘ಚೀನಾ ಗೂಡ್ಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಗ್ಯಾರಂಟಿಯೂ ಇಲ್ಲ, ವಾರಂಟಿಯೂ ಇಲ್ಲ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹರಿಹಾಯ್ದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಬೆಂಗಳೂರನ್ನು ಕ್ರೈಂ ಸಿಟಿ ಎಂದು ಮೂದಲಿಸುವ ಮೂಲಕ ಮೋದಿ ಬೆಂಗಳೂರಿನ ಖ್ಯಾತಿ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಕ್ರೈಂ ಹೆಚ್ಚಿದೆ ಎಂಬುದನ್ನು ಮರೆಯಬಾರದು’ ಎಂದರು.

‘ಮೋದಿಯವರು, ಶಾಸಕ ಹ್ಯಾರಿಸ್‌ ಪುತ್ರ ಮೊಹಮದ್‌ ನಲಪಾಡ್ ಬಗ್ಗೆ ಮಾತನಾಡುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿ ಅವರದ್ದೇ ಪಕ್ಷದವರು ಅತ್ಯಾಚಾರ ಮಾಡುವುದು, ಜೈಲಿನಲ್ಲಿ ಹತ್ಯೆ ನಡೆಸುವುದು ಅವರ ಕಣ್ಣಿಗೆ ಕಾಣುವುದಿಲ್ಲವೇ’ ಎಂದು ಕೆಣಕಿದರು.

‘ಮೋದಿಯವರೇ, ನಮ್ಮ ಕಾಲಕ್ಕಿಂತ ನಿಮ್ಮ ಕಾಲದಲ್ಲಿ ಕ್ರೈಂ ಹೆಚ್ಚಾಗಿತ್ತು. ಬೆಂಗಳೂರು ಗಾರ್ಬೇಜ್‌ ಸಿಟಿ ಅನ್ನಿಸಿಕೊಂಡದ್ದೂ ನಿಮ್ಮ ಕಾಲದಲ್ಲಿ. ಅದನ್ನು ಸರಿ ಮಾಡಿದ್ದು ನಾವು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.