ಅಗಣಿತ ಸಾಧ್ಯತೆಗಳ ಗಣಿ ವಿಜ್ಞಾನ

7

ಅಗಣಿತ ಸಾಧ್ಯತೆಗಳ ಗಣಿ ವಿಜ್ಞಾನ

Published:
Updated:
ಅಗಣಿತ ಸಾಧ್ಯತೆಗಳ ಗಣಿ ವಿಜ್ಞಾನ

ಎಸ್‌ಎಸ್‌ಎಲ್‌ಸಿ ನಂತರ ಭಿನ್ನವಾದ ಏನನ್ನಾದರೂ ಕಲಿಯಬೇಕು ಎಂದು ಯೋಚಿಸುವ ವಿದ್ಯಾರ್ಥಿಗಳಿಗೆ ಉತ್ತಮ ಆಯ್ಕೆಗಳಲ್ಲೊಂದು ಗಣಿವಿಜ್ಞಾನದಲ್ಲಿ ಡಿಪ್ಲೊಮಾ ಪಡೆಯುವುದು. ಈ ಕೋರ್ಸ್‌ನ ಅವಧಿ 4 ವರ್ಷ. ಪಠ್ಯಕ್ರಮವು ತಂತ್ರಜ್ಞಾನ ಮತ್ತು ಪ್ರಚಲಿತ ವಿಷಯಗಳನ್ನು ಆಧರಿಸಿ ಬದಲಾವಣೆಯಾಗುತ್ತಿರುತ್ತದೆ.

ಗಣಿವಿಜ್ಞಾನದಲ್ಲಿ ಬಿ.ಇ. ಹಾಗೂ ಬಿ.ಟೆಕ್. ಪದವಿ ಪಡೆಯಲು ಅವಕಾಶವಿದೆ. ಪದವಿ ಶಿಕ್ಷಣದಲ್ಲಿ ವಿಜ್ಞಾನವಿಷಯ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಗಣಿವಿಜ್ಞಾನದಲ್ಲಿ ಬಿ.ಟೆಕ್. ಅಥವಾ ಬಿ.ಇ. ಪದವಿ ಪಡೆಯಬಹುದು.

ಗಣಿಸರ್ವೆ, ಗಣಿಯಲ್ಲಿ ಉಪಯೋಗಿಸುವ ತಂತ್ರಜ್ಞಾನ, ಗಣಿಗಾರಿಕೆಯಲ್ಲಿ ಉಪಯೋಗಿಸುವ ಯಂತ್ರಗಳು, ಗಣಿ ಭೂಗೋಳಶಾಸ್ತ್ರ, ಡ್ರಿಲ್ಲಿಂಗ್ ಮತ್ತು ಬ್ಲಾಸ್ಟಿಂಗ್ ಎಂಜಿನಿಯರಿಂಗ್, ಕಲ್ಲುಗಣಿಗಾರಿಕೆ ತಂತ್ರಜ್ಞಾನ, ಕಲ್ಲು ಗಣಿಗಾರಿಕೆಯಲ್ಲಿ ಉಪಯೋಗಿಸುವ ಯಂತ್ರಗಳು, ಡಿಸೈನ್ ಆಫ್ ರಾಕ್ ಸ್ಟ್ರಕ್ಚರ್ಸ್, ನ್ಯೂಮರಿಕಲ್ ಸ್ಟ್ರೆಸ್‌ ಅನಾಲಿಸಿಸ್ ಆಫ್ ಎಸ್ಕವೇಷನ್, ಟನಲಿಂಗ್ ಎಂಜಿನಿಯರಿಂಗ್, ರಿಲಯಬಿಲಿಟಿ ಎಂಜಿನಿಯರಿಂಗ್, ಸೇಫ್ಟಿ ಎಂಜಿನಿಯರಿಂಗ್, ಇಂಡಸ್ಟ್ರಿಯಲ್ ಎಂಜಿನಿಯರಿಂಗ್, ಸ್ಟ್ರಕ್ಚರಲ್ ಜಿಯಾಲಾಜಿ ಅಂಡ್ ಡಿಸ್ಕಂಟಿನ್ಯೂಟಿ ಅನಾಲಿಸಿಸ್ ವಿಷಯಗಳ ಅಧ್ಯಯನ ಈ ಪದವಿಯಲ್ಲಿರುತ್ತದೆ.

ಗಣಿ ಮತ್ತು ಕೈಗಾರಿಕೆಗಳಿಗೆ ಭೇಟಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗಣಿ ತಾಂತ್ರಿಕ ಕಾರ್ಯಾಗಾರಗಳಲ್ಲಿ ಭಾಗಿಯಾಗುವ ಅವಕಾಶಗಳು ಈ ವಿದ್ಯಾರ್ಥಿಗಳಿಗೆ ಇರುತ್ತದೆ. ಕೇಂದ್ರ, ರಾಜ್ಯ ಸರ್ಕಾರಗಳು ನೀಡುವ ಸ್ಕಾಲರ್‌ಶಿಪ್, ಅಂತರರಾಷ್ಟ್ರೀಯ ಗಣಿಸಂಸ್ಥೆಗಳ ಫೆಲೋಷಿಪ್‌ ವಿದ್ಯಾರ್ಥಿಗಳಿಗೆ ಲಭ್ಯವಿದೆ.

ಉದ್ಯೋಗ ಅವಕಾಶಗಳು: ಗಣಿವಿಜ್ಞಾನದಲ್ಲಿ ಡಿಪ್ಲೊಮಾ ಅಥವಾ ಎಂಜಿನಿಯರಿಂಗ್ ಪದವಿ ಹೊಂದಿರುವವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ. ಪ್ರಮುಖ ಪೆಟ್ರೋಲಿಯಂ ಉತ್ಪಾದಕ ರಾಷ್ಟ್ರಗಳಾದ ಕತಾರ್, ಸೌದಿ ಅರೇಬಿಯಾ, ಕುವೈತ್‌ನಲ್ಲಿರುವ ಗಣಿ ಕಂಪನಿಗಳು ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸೆಲೆಕ್ಷನ್ ಮೂಲಕ ನೇಮಕ ಮಾಡಿಕೊಳ್ಳುತ್ತವೆ.

ಚಿನ್ನದ ಗಣಿಗಾರಿಕೆಯಲ್ಲಿ ಪ್ರಸಿದ್ಧವಾಗಿರುವ ಚೀನಾ ಮತ್ತು ವಜ್ರ ಗಣಿಗಾರಿಕೆಯಲ್ಲಿ ಮುಂದಿರುವ ಆಫ್ರಿಕಾಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಿವೆ.

ಗಣಿವಿಜ್ಞಾನಿ, ಗಣಿ ಎಂಜಿನಿಯರ್, ಡ್ರಿಲ್ಲಿಂಗ್ ಮತ್ತು ಬ್ಲಾಸ್ಟಿಂಗ್ ಎಂಜಿನಿಯರ್, ಜೂನಿಯರ್ ಅರ್ಥ್ ಒಬ್ಸರ್ವರ್, ವಾಟರ್ ಮೈನಿಂಗ್ ಎಂಜಿನಿಯರ್, ಎಲೆಕ್ಟ್ರಿಕಲ್ ಮೈನಿಂಗ್ ಎಂಜಿನಿಯರ್, ಗ್ಯಾಸ್ ಮೈನಿಂಗ್ ಎಂಜಿನಿಯರ್, ಮೆಟಲ್ ಮೈನಿಂಗ್ ಎಂಜಿನಿಯರ್ ಆಗಿ ದುಡಿಯಬಹುದಾಗಿದೆ. ಕೇಂದ್ರ ಗಣಿ ಮತ್ತು ವಿಜ್ಞಾನ ಇಲಾಖೆಯಲ್ಲಿ ಅಧಿಕಾರಿಯಾಗಿ, ಗಣಿವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲೂ ಅವಕಾಶವಿದೆ.

ಭಾರತದಲ್ಲೂ ಸಾಕಷ್ಟು ಮೈನಿಂಗ್‌ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು – ಕಲ್ಲಿದ್ದಲು, ಪೆಟ್ರೋಲಿಯಂ, ಅದಿರು ಗಣಿಗಾರಿಕೆ ಕಂಪನಿಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ.

**

ಡಿಪ್ಲೊಮ ಕಾಲೇಜುಗಳು

1. ಸ್ಕೂಲ್ಸ್ ಆಫ್ ಮೈನ್ಸ್‌, ಕೋಲಾರ

ಫೋನ್: 
081532–60378

ವೆಬ್‌ಸೈಟ್: dte.karnataka.gov.in/Institutes/schoolofmines

2. ಟಿ.ಎಂ.ಎ.ಇ. ಸೊಸೈಟಿ ಪಾಲಿಟೆಕ್ನಿಕ್ ಕಾಲೇಜು, ಹೊಸಪೇಟೆ

ಫೋನ್: 
083942–66211

3. ಆಚಾರ್ಯ ಪಾಲಿಟೆಕ್ನಿಕ್ ಕಾಲೇಜು, ಬೆಂಗಳೂರು

ಫೋನ್:
 080–23722222.

ವೆಬ್‌ಸೈಟ್: acharya.ac.in

4. ವಿಜಯಲಕ್ಷ್ಮೀ ಪಾಲಿಟೆಕ್ನಿಕ್ ಕಾಲೇಜು, ಕೋಲಾರ

ಫೋನ್:
 081532–69632

5. ಶ್ರೀ ಸಂಜೀವ ಪಾಲಿಟೆಕ್ನಿಕ್ ಕಾಲೇಜು, ರಾಯಚೂರು

ಫೋನ್:
 097402 65165.

**

ಎಂಜಿನಿಯರಿಂಗ್ ಕಾಲೇಜುಗಳು

1. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ, ಸುರತ್ಕಲ್

ಫೋನ್: 
0824–2473051.

ಇ–ಮೇಲ್: mininghod@nitk.ac.in

ವೆಬ್‌ಸೈಟ್: nitk.ac.in

2. ಡಾ.ಟಿ. ತಿಮ್ಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೋಲಾರ

ಫೋನ್:
 08153–265413. 

ವೆಬ್‌ಸೈಟ್: drttit.gvet.edu.in

3. ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು

ಫೋನ್: 080–23722222.

ವೆಬ್‌ಸೈಟ್: acharya.ac.in

4. ಶ್ರೀ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೋಲಾರ

ಫೋನ್:
 08153270975

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry