ಶಿಲುಬೆ ಮೇಲೆ ‘ಓಂ’: ಪ್ರಚೋದನಕಾರಿ ಬರಹಕ್ಕೆ ಆಕ್ರೋಶ

7

ಶಿಲುಬೆ ಮೇಲೆ ‘ಓಂ’: ಪ್ರಚೋದನಕಾರಿ ಬರಹಕ್ಕೆ ಆಕ್ರೋಶ

Published:
Updated:
ಶಿಲುಬೆ ಮೇಲೆ ‘ಓಂ’: ಪ್ರಚೋದನಕಾರಿ ಬರಹಕ್ಕೆ ಆಕ್ರೋಶ

ನವದೆಹಲಿ: ಇಲ್ಲಿನ ಪ್ರತಿಷ್ಠಿತ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನ ಚರ್ಚ್‌ ಬಾಗಿಲಿನ ಮೇಲೆ ‘ದೇವಾಲಯವನ್ನು ಇಲ್ಲಿಯೇ ನಿರ್ಮಿಸಲಾಗುವುದು’ ಎಂಬ ಪ್ರಚೋದನಕಾರಿ ವಾಕ್ಯಗಳನ್ನು ಬರೆಯಲಾಗಿದೆ.

ಕಾಲೇಜಿನ ಸಿಬ್ಬಂದಿ ತಕ್ಷಣ ಆ ಬರಹವನ್ನು ಅಳಿಸಿದರೂ, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳು ವೈರಲ್ ಆಗಿವೆ. ಈ ಉದ್ರೇಕಕಾರಿ ಬರಹದ ವಿರುದ್ಧ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಾರ್ಥನಾ ಮಂದಿರದ ಹಿಂಬದಿಯಲ್ಲಿರುವ ಶಿಲುಬೆಯ ಮೇಲೆ ‘ಓಂ’ ಮತ್ತು ‘ನಾನು ನರಕಕ್ಕೆ ಹೋಗುತ್ತಿದ್ದೇನೆ’ ಎಂದೂ ಬರೆಯಲಾಗಿತ್ತು. ಅದನ್ನೂ ಅಳಿಸಿ ಹಾಕಲಾಗಿದೆ ಎಂದು ಕಾಲೇಜಿನ ವಿದ್ಯಾರ್ಥಿ ಸಂಘಟನೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry