ಇದೇ 9 ರಂದು ಮುಷ್ಕರ ಬ್ಯಾಂಕ್‌ ಸಿಬ್ಬಂದಿ ಎಚ್ಚರಿಕೆ

7

ಇದೇ 9 ರಂದು ಮುಷ್ಕರ ಬ್ಯಾಂಕ್‌ ಸಿಬ್ಬಂದಿ ಎಚ್ಚರಿಕೆ

Published:
Updated:

ನವದೆಹಲಿ: ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು (ಐಬಿಎ) ಮುಂದಿಟ್ಟಿರುವ ಶೇ 2 ರಷ್ಟು ವೇತನ ಹೆಚ್ಚಳ ಪ‍್ರಸ್ತಾವವನ್ನು ಬ್ಯಾಂಕ್‌ ಸಿಬ್ಬಂದಿ ಒಕ್ಕೂಟಗಳು ತಿರಸ್ಕರಿಸಿವೆ. ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಮೇ 9ರಂದು ದೇಶವ್ಯಾಪಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

‘2017ರ ನವೆಂಬರ್‌ 1 ರಿಂದ ವೇತನ ಪರಿಷ್ಕರಣೆ ಆಗಿಲ್ಲ. ಶನಿವಾರ ನಡೆದ ಸಭೆಯಲ್ಲಿ  ಐಬಿಎ ಪ್ರಸ್ತಾಪಿಸಿರುವ ವೇತನ ಹೆಚ್ಚಳದ ಪ್ರಮಾಣ ಅತ್ಯಂತ ಕನಿಷ್ಠ ಮಟ್ಟದ್ದಾಗಿದ್ದು, ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ’ ಎಂದು ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟದ (ಎಐಬಿಒಸಿ) ಪ್ರಧಾನ ಕಾರ್ಯದರ್ಶಿ ಡಿ.ಟಿ. ಫ್ರಾನ್ಕೊ ತಿಳಿಸಿದ್ದಾರೆ.

‘ಸಭೆಯ ಸಂಪೂರ್ಣ ವಿವರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾ ಗುವುದು. ಐಬಿಎ ಅಥವಾ ಸರ್ಕಾರ ತಕ್ಷಣವೇ ಸ್ಪಂದಿಸದೇ ಇದ್ದರೆ ಮುಷ್ಕರೆ ನಡೆಸಲಾಗುವುದು’ ಎಂದು ಬ್ಯಾಂಕ್‌ ನೌಕರರ ರಾಷ್ಟ್ರೀಯ ಸಂಘಟನೆಯ ಉಪಾಧ್ಯಕ್ಷ ಅಶ್ವಿನ್‌ ರಾಣಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry