ಹವಾಯಿಯಲ್ಲಿ ಜ್ವಾಲಾಮುಖಿ ಕಟ್ಟೆಚ್ಚರ ವಹಿಸಲು ಸೂಚನೆ

7
6.9 ರಷ್ಟು ತೀವ್ರತೆಯ ಭೂಕಂಪ

ಹವಾಯಿಯಲ್ಲಿ ಜ್ವಾಲಾಮುಖಿ ಕಟ್ಟೆಚ್ಚರ ವಹಿಸಲು ಸೂಚನೆ

Published:
Updated:
ಹವಾಯಿಯಲ್ಲಿ ಜ್ವಾಲಾಮುಖಿ ಕಟ್ಟೆಚ್ಚರ ವಹಿಸಲು ಸೂಚನೆ

ಪಹೊವಾ, ಹವಾಯಿ (ರಾಯಿಟರ್ಸ್): ಕೈಲೆಯಾ ಜ್ವಾಲಾಮುಖಿಯಿಂದ ಯಾವಾಗ ಬೇಕಾದರೂ ಲಾವಾರಸ ಹೊರಬರುವ ಸಾಧ್ಯತೆ ಇದ್ದು, ಹವಾಯಿ ದ್ವೀಪದ (ಹವಾಯಿ ಬಿಗ್ ಐಲ್ಯಾಂಡ್) ವಿವಿಧ ಪ್ರದೇಶಗಳ ನಿವಾಸಿಗಳು ಕಟ್ಟೆಚ್ಚರ ವಹಿಸುವಂತೆ ಹವಾಯಿ ಜ್ವಾಲಾಮುಖಿ ವೀಕ್ಷಣಾಲಯ ಸೂಚಿಸಿದೆ.

ದ್ವೀಪದ ಆಗ್ನೇಯ ಭಾಗದ ವಿವಿಧ ಪ್ರದೇಶಗಳಲ್ಲಿ ಗುರುವಾರ ಪ್ರಬಲ ಜ್ವಾಲಾಮುಖಿ ಉಂಟಾಗಿತ್ತು. ಪಹೋವಾ ಪಟ್ಟಣದಲ್ಲಿ 6.9ರಷ್ಟು ತೀವ್ರತೆಯ ಭೂಕಂಪದ ಜತೆ, ಲಾವಾರಸ ಹರಿದು ಬಂದಿತ್ತು. ಹೀಗಾಗಿ ಆ ಪ್ರದೇಶಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು.

ಜ್ವಾಲಾಮುಖಿಯಿಂದ 19 ಕಿ.ಮೀ ದೂರದ ಲೇಲಾನಿ ಎಸ್ಟೇಟ್ಸ್‌ ಉಪಪ್ರಾಂತ್ಯದವರೆಗೆ ಶುಕ್ರವಾರ ಲಾವಾರಸ ಹರಿದುಬಂದಿತ್ತು.

‘ಜ್ವಾಲಾಮುಖಿಯ ತೀವ್ರತೆ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ. ಮತ್ತೆ ಭೂಕಂಪ ಮತ್ತು ಲಾವಾರಸ ಬಿಡುಗಡೆ ಆಗಬಹುದು. ಈ ಪರಿಸ್ಥಿತಿಯು ಎಲ್ಲರಿಗೂ ಕಠಿಣ ಸವಾಲಾಗಿ ಪರಿಣಮಿಸಿದೆ’ ಎಂದು ವೀಕ್ಷಣಾಲಯದ ವಿಜ್ಞಾನಿ ಟೀನಾ ನೀಲ್ ತಿಳಿಸಿದ್ದಾರೆ.

ಅವರು ನಿವಾಸಿಗಳ ಸಭೆಯೊಂದರಲ್ಲಿ ಈ ಮುನ್ಸೂಚನೆ ನೀಡಿದ್ದಾರೆ. ಜ್ವಾಲಾಮುಖಿ ಮತ್ತು ಭೂಕಂಪದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry