2030ರ ವೇಳೆಗೆ ಇಂಗಾಲದ ಪ್ರಮಾಣ ಹೆಚ್ಚಳ

7

2030ರ ವೇಳೆಗೆ ಇಂಗಾಲದ ಪ್ರಮಾಣ ಹೆಚ್ಚಳ

Published:
Updated:

ಬೆಂಗಳೂರು: ವಾಹನಗಳು ಹೊರಸೂಸುತ್ತಿರುವ ಇಂಗಾಲದ ಡೈಆಕ್ಸೈಡ್‌ ಈಗಿನ ದರದಲ್ಲೇ ಏರುತ್ತಾ ಸಾಗಿದರೆ, 2030ರ ವೇಳೆಗೆ ಶೇ 2,313ರಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನಡೆಸಿರುವ ಅಧ್ಯಯನ ಬಹಿರಂಗಪಡಿಸಿದೆ.

ಇಂಡೊ–ನಾರ್ವೆಯ ಯೋಜನೆ ಭಾಗವಾಗಿ ಐಐಎಸ್ಸಿಯು ‘ವಾಸಯೋಗ್ಯ ಬೆಂಗಳೂರಿಗೆ ಸುಸ್ಥಿರ ಸಾರಿಗೆ ಕ್ರಮಗಳು’  ಕುರಿತು ನಾಲ್ಕು ವರ್ಷ ಅಧ್ಯಯನ ನಡೆಸಿತ್ತು. 2008 ಅನ್ನು ಮೂಲ ವರ್ಷವನ್ನಾಗಿ ಪರಿಗಣಿಸಿತ್ತು.

2008ರಲ್ಲಿ ವಾರ್ಷಿಕ ಇಂಗಾಲದ ಡೈ ಆಕ್ಸೈಡ್‌ ಹೊರಸೂಸುವಿಕೆ ಪ್ರಮಾಣ 6.95 ಲಕ್ಷ ಟನ್‌ಗಳಷ್ಟಿದ್ದುದು 2030ರ ವೇಳೆಗೆ 1.67 ಕೋಟಿ ಟನ್‌ಗಳಷ್ಟಾಗಲಿದೆ. ಜೊತೆಗೆ ವಾಹನಗಳ ಸಂಚಾರ ಪ್ರಮಾಣವೂ 12 ವರ್ಷದೊಳಗೆ ದುಪ್ಪಟ್ಟು ಆಗಲಿದ್ದು, 4.8 ಕೋಟಿ ಕಿ.ಮೀಗೆ ತಲುಪಲಿದೆ ಎಂದೂ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.‌

ಕೆಲವು ನಿಯಂತ್ರಣ ಕ್ರಮಗಳ ಕಟ್ಟುನಿಟ್ಟಿನ ಅನುಷ್ಠಾನದ ಮೂಲಕ 2030ರವೇಳೆಗೆ ಇಂಗಾಲ ಡೈ ಆಕ್ಸೈಡ್‌ ಹೊರಸೂಸುವ ಪ್ರಮಾಣವನ್ನು ಶೇ 98ರಷ್ಟು ಕಡಿಮೆ ಮಾಡಬಹುದು ಎಂದೂ ವರದಿ ಹೇಳಿದೆ. ಇದಕ್ಕಾಗಿ ಸಂಚಾರ ದಟ್ಟಣೆ ನಿವಾರಣೆ, ಗಾಳಿಯಲ್ಲಿ ತೇಲುವ ಕಣಗಳು, ಇಂಗಾಲದ ಮಾನಾಕ್ಸೈಡ್‌, ಇಂಗಾಲ, ಸಾರಜನಕದ ಆಕ್ಸೈಡ್‌, ಹೈಡ್ರೊಕಾರ್ಬನ್‌, ಹಾಗೂ ಹಸಿರುಮನೆ ಅನಿಲಗಳ ಪ್ರಮಾಣವನ್ನು ಜಿಡಿಪಿ ಏರಿಕೆಗೆ ಅನುಗುಣವಾಗಿ ಕಡಿಮೆ ಮಾಡಬೇಕಾಗಿದೆ.

CO2 ಪ್ರಮಾಣ ತಗ್ಗಿಸಲು ಏನು ಮಾಡಬೇಕು?

ಸಾರ್ವಜನಿಕ ಸಾರಿಗೆ ಜಾಲ ವಿಸ್ತರಣೆ

ಕೆಲವು ರಸ್ತೆಗಳಿಗೆ ಕಾರುಗಳ ಪ್ರವೇಶ ನಿರ್ಬಂಧ

ಸೈಕ್ಲಿಂಗ್‌ ಹಾಗೂ ಪಾದಚಾರಿ ಮೂಲಸೌಕರ್ಯ ಅಭಿವೃದ್ಧಿ

ಕಾರ್‌ಪೂಲಿಂಗ್‌ಗೆ ಉತ್ತೇಜನ

ಪ್ರಮುಖ ಸಂಚಾರ ಕಾರಿಡಾರ್‌ಗಳ ಇಕ್ಕೆಲಗಳಲ್ಲಿ ಕಟ್ಟಡಗಳ ಮಿಶ್ರ ಬಳಕೆಗೆ ಪ್ರೋತ್ಸಾಹ

ಎಲ್ಲ ಬಸ್‌ಗಳನ್ನು ವಿದ್ಯುಚ್ಚಾಲಿತ ವಾಹನಗಳನ್ನಾಗಿ ಪರಿವರ್ತಿಸುವುದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry