ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಕ್‌ಔಟ್‌ ಹಂತ ಪ್ರವೇಶಿಸಲಿದ್ದೇವೆ’

Last Updated 5 ಮೇ 2018, 19:36 IST
ಅಕ್ಷರ ಗಾತ್ರ

ದುಬೈ: ‘ಮುಂದಿನ ವರ್ಷ ಯುಎಇನಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್‌ ಕಪ್‌ನ ನಾಕ್‌ಔಟ್‌ ಹಂತಕ್ಕೆ ತಲುಪುವ ಎಲ್ಲ ಅರ್ಹತೆ ನಮ್ಮ ತಂಡಕ್ಕಿದೆ’ ಎಂದು ಭಾರತ ಫುಟ್‌ಬಾಲ್‌ ತಂಡದ ಕೋಚ್‌ ಸ್ಟೀಫನ್‌ ಕಾನ್‌ಸ್ಟಂಟೈನ್‌ ಹೇಳಿದರು.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಾವು ಎ ಗುಂಪಿನಲ್ಲಿದ್ದೇವೆ. ಈ ಗುಂಪಿನಲ್ಲಿರುವ ಯುಎಇ, ಬಹರೇನ್‌ ಹಾಗೂ ಥಾಯ್ಲೆಂಡ್‌ ತಂಡಗಳು ಉತ್ತಮವಾಗಿದೆ. ಆದರೆ, ಅವರನ್ನು ಎದುರಿಸುವ ಸಾಮರ್ಥ್ಯ ನಮಗಿದೆ. ತಂಡವು ಈ ನಿಟ್ಟಿನಲ್ಲಿ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ’ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ, ‘ತಂಡವಾಗಿ ನಮ್ಮ ಶಕ್ತಿ ತೋರಲು ಎಎಫ್‌ಸಿ ಏಷ್ಯನ್‌ ಕಪ್‌ ಒಂದು ಉತ್ತಮ ವೇದಿಕೆ. ಏಷ್ಯಾದ ಶ್ರೇಷ್ಠ ಆಟಗಾರರು ಇದರಲ್ಲಿ ಆಡಲಿದ್ದಾರೆ. ಹಲವು ಸವಾಲುಗಳಿಂದ ಕೂಡಿದ ರೋಮಾಂಚಕಾರಿ ಅನುಭವವನ್ನು ಏಷ್ಯನ್‌ ಕಪ್‌ ನೀಡುವುದರಲ್ಲಿ ಸಂದೇಹವಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT