‘ಜನರ ಪ್ರೋತ್ಸಾಹದಿಂದ ಸಿಲಿಕಾನ್‌ ಸಿಟಿಯಾಯ್ತು’

7

‘ಜನರ ಪ್ರೋತ್ಸಾಹದಿಂದ ಸಿಲಿಕಾನ್‌ ಸಿಟಿಯಾಯ್ತು’

Published:
Updated:

ಬೆಂಗಳೂರು: ‘ಸಿಲಿಕಾನ್ ಸಿಟಿ, ಐಟಿಬಿಟಿ ಸಿಟಿಯನ್ನಾಗಿ ರೂಪಿಸಲು ಜನರ ಪ್ರೋತ್ಸಾಹ, ಸಲಹೆ, ಸಹಕಾರ ಕಾರಣ ಎಂದು ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹೇಳಿದರು.

ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಎಂ.ಮುನಿರಾಜುಗೌಡ ಪರವಾಗಿ ಕೆಂಪೇಗೌಡನಗರ, ಪ್ರೇಮ್‍ನಗರ, ಲಗ್ಗೆರೆ, ಚೌಡೇಶ್ವರಿನಗರ, ಮಾಳಗಾಳದಲ್ಲಿ ಮತಯಾಚಿಸಿದರು.

‘ಅನೇಕ ಅಡೆತಡೆ ನಿವಾರಿಸಿ ಬೆಂಗಳೂರು ಅಭಿವೃದ್ಧಿ ಪಡಿಸಿದೆ. ನಂತರ ಬಂದ ಯಾವ ಮುಖ್ಯಮಂತ್ರಿ ಬೆಂಗಳೂರು ಅಭಿವೃದ್ಧಿಗೆ ಶ್ರಮಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಅಭ್ಯರ್ಥಿ ಪಿ.ಎಂ.ಮುನಿರಾಜುಗೌಡ, ‘ಸಂಪೂರ್ಣ ಅಭಿವೃದ್ಧಿಗೆ ಒಮ್ಮೆ ಅವಕಾಶ ಮಾಡಿಕೊಡಿ. ಕೆಂಪೇಗೌಡರು ನಿರ್ಮಿಸಿರುವ ನಗರವನ್ನು ಅಭಿವೃದ್ಧಿ ಪಡಿ

ಸೋಣ, ನಗರವನ್ನು ಲೂಟಿ ಮಾಡಿರುವ ಕಾಂಗ್ರೆಸ್ ತಿರಸ್ಕರಿಸಿ, ಪಕ್ಷಾಂತರಿಗಳಿಗೆ ಬುದ್ಧಿ ಕಲಿಸಿ’ ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry