ಚುನಾವಣಾ ಪ್ರಚಾರದಲ್ಲಿ ಪತ್ನಿಯರ ರಂಗು

7

ಚುನಾವಣಾ ಪ್ರಚಾರದಲ್ಲಿ ಪತ್ನಿಯರ ರಂಗು

Published:
Updated:

ಅರಸೀಕೆರೆ: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮತದಾರರ ಓಲೈಕೆಗೆ ಕೊನೆ ಕ್ಷಣಗಳ ಕಸರತ್ತು ಬಿಸಿಲ ಝಳದಲ್ಲೂ ಜೋರಾಗಿದೆ.

ಅಭ್ಯರ್ಥಿಗಳು ಮನೆಮನೆಗೆ ತೆರಳಿ ಮತಯಾಚನೆ ಮಾಡುವುದು ಒಂದೆಡೆದರೆ, ಅವರ ಪತ್ನಿಯರ ಮತ ಯಾಚನೆ ಇನ್ನೊಂದೆಡೆ ಸಾಗಿದೆ.

ಜೆ.ಡಿಎಸ್‌ ಅಭ್ಯರ್ಥಿ ಕೆ.ಎಂ. ಶಿವಲಿಂಗೇಗೌಡ ಪರ ಅವರ ಪತ್ನಿ ಪುಷ್ಪಾವತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೂಪಾ ಗುರುಮೂರ್ತಿ, ಜಿ ಪಂ ಸದಸ್ಯರಾದ ಲೀಲಾ ಧರ್ಮಶೇಖರ್‌ ವತ್ಸಲಾ ಶೇಖರಪ್ಪ, ತಾ.ಪಂ ಸದಸ್ಯೆ ಪ್ರೇಮಾ ಧರ್ಮಣ್ಣ, ನಗರಸಭಾ ಸದಸ್ಯೆ ಅನ್ನಪೂರ್ಣ ಸತೀಶ್‌ ಮಾಜಿ ಸದಸ್ಯೆ ಗಂಗಮ್ಮ ಪಕ್ಷದ ಮಹಿಳಾ ಮುಖಂಡರು ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಕಾಂಗ್ರೆಸ್‌ ಪಕ್ಷದ ಜಿ.ಬಿ ಶಶಿಧರ್‌ ಪರವಾಗಿ ಅವರ ಪತ್ನಿ ಸುನೀತಾ, ಸೀದರಿ ರೂಪಾ, ನಾದಿನಿ ಸುಷ್ಮಾ ಸಿದ್ದೇಶ್‌, ನಗರಸಭಾ ಸದಸ್ಯೆ ಗೀತಾ ವಿಶ್ವನಾಥ್‌, ಓ .ಜಿ ಗೀತಾ ಸುನಿಲ್‌ ಜಿ.ಪಂ ಮಾಜಿ ಸದಸ್ಯೆ ಸುಲೋಚನಾ ಬಾಯಿ ಮತ್ತಿತರರು ಮತಯಾಚನೆ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.

ಬಿಜೆಪಿ ಅಭ್ಯರ್ಥಿ ಜಿ.ಮರಿಸ್ವಾಮಿ ಪರವಾಗಿ ಪತ್ನಿ ವೀಣಾ ಮರಿಸ್ವಾಮಿ, ತಾ.ಪಂ ಮಾಜಿ ಸದಸ್ಯೆ ಉಮಾ ಕುಮಾರ್‌, ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣಮ್ಮ, ನಗರ ಘಟಕದ ಅಧ್ಯಕ್ಷೆ ಗಾಯತ್ರಿ, ಕಾರ್ಯದರ್ಶಿ ಸುನಿತಾ, ಶುಭಾ ಮನೋಜ್‌ ರೂಪಾ, ಸಂಪತ್‌ ಕುಮಾರ್‌, ಪ್ರಭಾಮಣಿ ಅವರು ಮತದಾರರ ಮನ ಒಲಿಸುತ್ತಿದ್ದಾರೆ. ಒಟ್ಟಾರೆ ಪ್ರತಿಪುರಷರ ಹಿಂದೆ ಮಹಿಳಾ ಶಕ್ತಿ ಅನಿವಾರ್ಯ ಎಂಬುದನ್ನು ಈ ಚುನಾವಣೆಯಲ್ಲಿ ಮಹಿಳೆಯರು ಸಾಕ್ಷೀಕರಿಸುತ್ತಿದ್ದಾರೆ.

‘ನನ್ನ ಪತಿ ಹತ್ತು ವರ್ಷಗಳಿಂದಲೂ ಕ್ಷೇತ್ರದಲ್ಲಿ ಜನಸೇವೆ ಮಾಡುತ್ತಿದ್ದು ಜನರ ವಿಶ್ವಾಸ ಗಳಿಸಿದ್ದಾರೆ. ಸಾವಿರಾರು ಕಾರ್ಯಕರ್ತರು ಜೆ.ಡಿಎಸ್‌ ಅಭ್ಯರ್ಥಿ ಪರವಾಗಿ ಹೋರಾಟ ನಡೆಸುತ್ತಿದ್ದಾರೆ’ ಎಂದು ಜೆ.ಡಿಎಸ್‌ ಅಭ್ಯರ್ಥಿ ಶಿವಲಿಂಗೇಗೌಡರ ಪತ್ನಿ ಪುಷ್ಪಾವತಿ ಹೇಳಿದರು.

‘ಚುನಾವಣೆ ಎಂಬುದು ಒಂದು ಯದ್ಧ ಇದ್ದ ಹಾಗೆ. ಇದರಲ್ಲಿ ನಮ್ಮ ಮಾವನವರಾದ ಮಾಜಿ ಶಾಸಕ ಜಿ.ಎಸ್‌. ಬಸವರಾಜ್‌ ಅವರು ತಾಲ್ಲೂಕಿನ ಅಭಿವೃದ್ದಿಗೆ ಸೇವೆ ಮಾಡಿದ್ದು ನನ್ನ ಪತಿ ಶಶಿಧರ್‌ ಕೂಡ ಸೇವೆ ಸಲ್ಲಿಸುತ್ತಾರೆ.

ಆದ್ದರಿಂದ ಅವರ ಪರವಾಗಿ ನಮ್ಮ ಕುಟುಂಬದ ಸದಸ್ಯರು ಹಾಗೂ ಬೆಂಬಲಿಗರೊಡಗೂಡಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಶಶಿಧರ್ ಅವರ ಪತ್ನಿ ಸುನಿತಾ ನುಡಿದರು.

‘ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರನ್ನು ಗೌರವದಿಂದ ಕಾಣುವ ಹಾಗೂ ನಡೆಸಿಕೊಳ್ಳುವ ಪಕ್ಷಕ್ಕೆ ಮತ ನೀಡಿ’ ಎಂದು ಅರಸೀಕೆರೆ ಕ್ಷೇತ್ರದ ಬೆಜೆಪಿ ಅಭ್ಯರ್ಥಿ ಮರಿಸ್ವಾಮಿ ಅವರ ಪತ್ನಿ ವೀಣಾ ಮತಯಾಚನೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry