ನೀಟ್‌ ಪರೀಕ್ಷೆ : ವಿದ್ಯಾರ್ಥಿಗಳಲ್ಲಿ ಪೂರ್ವಸಿದ್ಧತೆ ಕೊರತೆ

7

ನೀಟ್‌ ಪರೀಕ್ಷೆ : ವಿದ್ಯಾರ್ಥಿಗಳಲ್ಲಿ ಪೂರ್ವಸಿದ್ಧತೆ ಕೊರತೆ

Published:
Updated:
ನೀಟ್‌ ಪರೀಕ್ಷೆ : ವಿದ್ಯಾರ್ಥಿಗಳಲ್ಲಿ ಪೂರ್ವಸಿದ್ಧತೆ ಕೊರತೆ

ಬೆಂಗಳೂರು: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಯಲ್ಲಿ ವಿದ್ಯಾರ್ಥಿಗಳ ಪೂರ್ವಸಿದ್ದತೆಯ ಕೊರತೆ ಎದ್ದುಕಾಣುತ್ತಿತ್ತು.

ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಿದ ಭದ್ರತಾ ಸಿಬ್ಬಂದಿ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟರು. ಬೆಳಿಗ್ಗೆ 7.30ರಿಂದ 8.30 ಹಾಗೂ 8.30ರಿಂದ 9.30 ಹೀಗೆ ಎರಡು ಬ್ಯಾಚ್‌ಗಳನ್ನು ಮಾಡಲಾಗಿತ್ತು. 9.30ರ ನಂತರ ಪ್ರವೇಶ ಇರಲಿಲ್ಲ.

ಆದರೆ ಕೆಲವು ವಿದ್ಯಾರ್ಥಿಗಳು ನಿಯಮ ಪಾಲಿಸದ ಕಾರಣ ಪರೀಕ್ಷೆ ಕೇಂದ್ರಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಪ್ರವೇಶ ಪತ್ರವನ್ನು ಸರಿಯಾಗಿ ಓದದೆ ಬಂದಿದ್ದ ವಿದ್ಯಾರ್ಥಿಗಳು ಶೂ ಹಾಗೂ ದೊಡ್ಡ ಕಿವಿಯೋಲೆಗಳನ್ನು ಧರಿಸಿದ್ದರು. ಇನ್ನು ಕೆಲವರು ಕೂದಲನ್ನು ಬಿಗಿಯಾಗಿ ಕಟ್ಟಿಕೊಂಡಿದ್ದರು. ದುಪ್ಪಟ್ಟಾ ಧರಿಸಿದ್ದರು. ಅವರನ್ನು ತಡೆದ ಸಿಬ್ಬಂದಿ ನಿಯಮದ ಪ್ರಕಾರ ಬಂದವರಿಗೆ ಪ್ರವೇಶ ಅವಕಾಶ ನೀಡಿದರು. ಇದರಿಂದ ಆತಂಕಗೊಂಡ ವಿದ್ಯಾರ್ಥಿಗಳು ತಮ್ಮ ವಸ್ತುಗಳನ್ನು ಹೊರಗೆ ಇದ್ದ ಪೋಷಕರಿಗೆ ಒಪ್ಪಿಸಿ ನಂತರ ಒಳಗೆ ಹೋದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry