ಬುಧವಾರ, ಮಾರ್ಚ್ 3, 2021
31 °C
ಮಾನವೀಯತೆ ಮೆರೆದ ರೈಲ್ವೆ ಪೊಲೀಸರು

ಚಿನ್ನಾಭರಣ ಹಿಂದಿರುಗಿಸಿದ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನಾಭರಣ ಹಿಂದಿರುಗಿಸಿದ ಸಿಬ್ಬಂದಿ

ಕಲಬುರ್ಗಿ: ಇಲ್ಲಿನ ರೈಲು ನಿಲ್ದಾಣದ ಪ್ಲಾಟ್‌ ಫಾರ್ಮ್ ನಂ.2ರಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಚಿನ್ನಾಭರಣಗಳುಳ್ಳ ಬ್ಯಾಗ್‌ ಅನ್ನು ರೈಲ್ವೆ ಪೊಲೀಸ್ ಸಿಬ್ಬಂದಿ ಶನಿವಾರ ವಾರಸುದಾರರಿಗೆ ಹಸ್ತಾಂತರಿಸಿದರು.

ಹೈದರಾಬಾದ್‌ನ ಶೀಲಂ ವೀರಭದ್ರಂ ಎಂಬುವರು ಬ್ಯಾಗ್ ಕಳೆದುಕೊಂಡವರು. ಇವರು ಸೊಲ್ಲಾಪುರದಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯೆ ಕಲಬುರ್ಗಿಯಲ್ಲಿ ಇಳಿದಿದ್ದರು. ಈ ವೇಳೆ ಬ್ಯಾಗ್ ಇಲ್ಲಿಯೇ ಬಿಟ್ಟು ಹೋಗಿದ್ದರು.

‘ಬ್ಯಾಗ್‌ ವಶಕ್ಕೆ ಪಡೆದು ಪಂಚನಾಮೆ ನಡೆಸಲಾಯಿತು. ಅದರಲ್ಲಿ 4–5 ತೊಲೆ ಚಿನ್ನಾಭರಣ, ಬಟ್ಟೆ ಮತ್ತು ಮೂರು ಎಟಿಎಂ ಕಾರ್ಡ್‌ಗಳಿದ್ದವು. ವಿಳಾಸ ದಾಖಲಾತಿ ಇರಲಿಲ್ಲ. ಎಟಿಎಂ ಕಾರ್ಡ್‌ ತೆಗೆದುಕೊಂಡು ಬ್ಯಾಂಕ್‌ಗೆ ಹೋಗಿ ವಾರಸುದಾರರ ಮೊಬೈಲ್ ಸಂಖ್ಯೆ ಪಡೆದೆವು. ಆ ಬಳಿಕ ಕರೆ ಮಾಡಿ ಅವರನ್ನು ಕರೆಸಿಕೊಂಡೆವು’ ಎಂದು ಆರ್‌ಪಿಎಫ್‌ ಸಿಬ್ಬಂದಿ ರವಿಕುಮಾರ ಜಿ.ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಎಎಸ್‌ಐ ಎಸ್.ಪಿ.ಮುಲ್ಲಾ, ಹವಾಲ್ದಾರ್ ವಿ.ಜಿ.ಚವಾಣ್, ವಸಂತ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.