ಅಂಚೆ ಮತದಾನ ಮಾಡಿದ 834 ನೌಕರರು

7
ಆಳಂದ ತಹಶೀಲ್ದಾರ್‌ ಕಚೇರಿಯಲ್ಲಿ ವ್ಯವಸ್ಥೆ

ಅಂಚೆ ಮತದಾನ ಮಾಡಿದ 834 ನೌಕರರು

Published:
Updated:

ಆಳಂದ: ವಿಧಾನಸಭಾ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಸುಮಾರು 834 ನೌಕರರು ಅಂಚೆ ಮೂಲಕ (ಇಡಿಸಿ) ತಮ್ಮ ಹಕ್ಕು ಚಲಾಯಿಸಿದರು. ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಎರಡು ದಿನ ನಡೆದ ಮತದಾನದಲ್ಲಿ ವಿವಿಧ ಇಲಾಖೆ ನೌಕರರು ಮತದಾನ ಮಾಡಿದರು.

ಅಂದಾಜು 1,260ಕ್ಕೂ ಅಧಿಕ ಸಂಖ್ಯೆಯಲ್ಲಿ ಇಡಿಸಿ ಮತದಾರರು ಇದ್ದಾರೆ. ಅವರ ಮತದಾನ ಅನುಕೂಲಕ್ಕಾಗಿ ತಹಶೀಲ್ದಾರ್‌ ಕಚೇರಿಯಲ್ಲಿ ಮತಗಟ್ಟೆ ತೆರೆಯಲಾಗಿದೆ. ಶುಕ್ರವಾರ ಒಟ್ಟು 319 ಜನ ಮತದಾನ ಮಾಡಿದರು. ಇದರಲ್ಲಿ 289 ಜನ ಪುರುಷರು, 30 ಜನ ಮಹಿಳಾ ಮತದಾರರು ಇದ್ದಾರೆ. ಶನಿವಾರ ಬೆಳಗ್ಗೆ 9ಕ್ಕೆ ಮತದಾನ ಆರಂಭಗೊಂಡು ಒಟ್ಟು 515 ಜನರು ಮತದಾನ ಮಾಡಿದರು. ಇದರಲ್ಲಿ 435 ಪುರುಷರು, 80 ಜನ ಮಹಿಳಾ ಮತದಾರರು ಮತದಾನ ಮಾಡಿದರು.

ಒಟ್ಟು 724 ಪುರುಷ ಮತದಾನ ನಡೆದರೆ, 110 ಮಾತ್ರ ಮಹಿಳಾ ಮತದಾನವಾಗಿದೆ. ಭಾನುವಾರವು ಮತದಾನ ಮುಂದುವರಿಯಲಿದೆ. ಚುನಾವಣೆ ನಿಮಿತ್ತ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಈ ಕಾರಣದಿಂದ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆಯುವ ನಿರೀಕ್ಷೆ ಇದೆ.

ಆಳಂದ ತಾಲ್ಲೂಕು ಹೊರತುಪಡೆಸಿ ಮತಕ್ಷೇತ್ರದ ಹೊರೆಗೆ ಕಾರ್ಯ ನಿರ್ವಹಿಸುತ್ತಿರುವ ನೌಕರರು ಶನಿವಾರ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಮತಗಟ್ಟೆ ಕೇಂದ್ರದ ಸುತ್ತ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ಪರ ಬೆಂಬಲಿಗರು ಇದ್ದರು. ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್.ಪಾಟೀಲ, ಬಿಜೆಪಿ ಅಭ್ಯರ್ಥಿ ಸುಭಾಷ ಗುತ್ತೇದಾರ ಹಾಗೂ ಜೆಡಿಎಸ್‌ ಅಭ್ಯರ್ಥಿ ಸೂರ್ಯಕಾಂತ ಕೊರಳ್ಳಿ, ಎಂಇಪಿ ಅಭ್ಯರ್ಥಿ ಅಫ್ಜಲ್ ಅನ್ಸಾರಿ ಸಹ ಮತಗಟ್ಟೆಗೆ ಭೇಟಿ ನೀಡಿದರು.

ಚುನಾವಣಾಧಿಕಾರಿ ಜಿ.ಎಸ್.ಗಡದನವರ, ತಹಶೀಲ್ದಾರ್‌ ಎಸ್.ಬಿ.ಫಿರ್ಜಾದೆ ಮತ್ತು ಮತಗಟ್ಟೆ ಅಧಿಕಾರಿಗಳು ಇಡಿಸಿ ಮತದಾನಕ್ಕೆ ಸೂಕ್ತ ವ್ಯವಸ್ಥೆ ಮಾಡಿದರು. ನೌಕರ ಮತದಾರರು ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry