ಚುನಾವಣಾ ಕಾರ್ಯಕ್ಕೆ ವಾಹನ ನೀಡಲು ಮನವಿ

7

ಚುನಾವಣಾ ಕಾರ್ಯಕ್ಕೆ ವಾಹನ ನೀಡಲು ಮನವಿ

Published:
Updated:

ಮೈಸೂರು: ಚುನಾವಣಾ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಅವಶ್ಯಕತೆ ಇರುವುದರಿಂದ ಖಾಸಗಿ ವಾಹನಗಳ ಮಾಲೀಕರು ವಾಹನ ಗಳನ್ನು ನೀಡಿ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಮನವಿ ಮಾಡಿದ್ದಾರೆ.‌‌

ಮೈಸೂರು ನಗರ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಪರವಾನಗಿ ಪಡೆದಿರುವ ಎಲ್ಲ ಖಾಸಗಿ ವಾಹನ ಮಾಲೀಕರು, ಟ್ರಾವೆಲ್‌ ಏಜೆನ್ಸಿಯವರು, ಮೈಸೂರು ಟ್ರಾವೆಲ್‌ ಏಜೆಂಟ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷರು, ಗೂಡ್ಸ್‌ ಟೆಂಪೊ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷರು ಹಾಗೂ ಮಿನಿ ಲಾರಿ ಅಸೋಸಿಯೇಷನ್‌ನ ಅಧ್ಯಕ್ಷರು ಸರ್ಕಾರ ನಿಗದಿಪಡಿಸಿದ ಬಾಡಿಗೆ ಆಧಾರದ ಮೇಲೆ ವಾಹನಗಳನ್ನು ನೀಡಬೇಕು. ನಗರ ಪೊಲೀಸ್‌ ಕಮಿಷನರ್‌ (ದೂ: 0821–2418100/ 103) ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ದೂ: 0821–2520040) ಅವರಿಗೆ ಸ್ವಯಂಸ್ಫೂರ್ತಿಯಿಂದ ನೀಡಬೇಕು. ಅಲ್ಲದೆ, ಆಸಕ್ತ ವಾಹನ ಮಾಲೀಕರು ವಾಹನಗಳನ್ನು ನೀಡಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಾಸಗಿ ವಾಹನಗಳ ಮಾಲೀಕರು, ಟ್ರಾವೆಲ್‌ ಏಜೆನ್ಸಿಯವರು ಪೊಲೀಸ್‌ ಇಲಾಖೆ ಅಥವಾ ಸಹಾಯಕ ಚುನಾವಣಾಧಿಕಾರಿಗಳು ಕೋರುವ ವಾಹನಗಳನ್ನು ನೀಡದಿದ್ದರೆ ಕಾಯ್ದೆ ಅಡಿ ವಶಕ್ಕೆ ಪಡೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry