ಸೋಮವಾರ, ಮಾರ್ಚ್ 1, 2021
20 °C

ಹುಬ್ಬಳ್ಳಿ: ವೀರ ಯೋಧ ಹನುಮಂತಪ್ಪ ಕೊಪ್ಪದ್ ನೆನೆದ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವೀರ ಯೋಧ ಹನುಮಂತಪ್ಪ ಕೊಪ್ಪದ್ ನೆನೆದ ಮೋದಿ

ಹುಬ್ಬಳ್ಳಿ: ಕರ್ನಾಟಕದಲ್ಲಿ ಬಿಜೆಪಿಗೆ ಎಲ್ಲಿ ನೋಡಿದರೂ ಉತ್ತಮ ಸ್ಪಂದನೆ ಇದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉಳಿದುಕೊಳ್ಳುವ ಯಾವುದೇ ಅವಕಾಶ ಕಾಣಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಎಂದು ಹೇಳಿದರು

ಮತಬೇಟೆಗಾಗಿ ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿ ಮಾತು ಆರಂಭಿಸಿದರು. ನಿಮ್ಮ ಪ್ರೀತಿ, ನಿಮ್ಮ ಆಶೀರ್ವಾದವೇ ಈ ದೇಶದ ಶಕ್ತಿ. ನಿಮಗೆ ಕೈ ಜೋಡಿಸಿ ನಮಿಸುತ್ತೇನೆ ಎಂದರು.

ಕನ್ನಡದಲ್ಲಿ ಮಾತನಾಡಿದ ಮೋದಿ: ಹುಬ್ಬಳ್ಳಿ-ಧಾರವಾಡ ಮಂದಿಗೆ ನಮಷ್ಕಾರ್‌ರಿ, ಎಲ್ಲರೂ ಹೋಗಿದ್ದೀರಿ. ಸಿದ್ದಾರೂಢರು, ಮೂರು ಸಾವಿರ ಮಠದ ಸ್ವಾಮಿಗಳು, ದ.ರಾ. ಬೇಂದ್ರೆ, ಗಂಗೂಬಾಯಿ ಹಾನಗಲ್, ಯೋಧ ಹನುಮಂತಪ್ಪ ಕೊಪ್ಪದ್ ಅವರನ್ನು ನೆನೆದರು. 

ಈ ಮಣ್ಣಿನ ಮಗ ವೀರ ಯೋಧ ಹುತಾತ್ಮ ಹನುಮಂತಪ್ಪ ಕೊಪ್ಪದ್ ಅವರಿಗೆ ಎಲ್ಲಕ್ಕೂ ಮೊದಲು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಸಿಯಾಚಿನ್‌ನ ಅತಿಶೀತ ವಾತಾವರಣದಲ್ಲಿ ಆರು ದಿನ ಹಿಮಗಡ್ಡೆಯ ಅಡಿ ಸಾವಿನೊಂದಿಗೆ ಹೋರಾಡಿದ್ದರು. 

ಆರು ದಿನಗಳ ನಂತರ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹನುಮಂತಪ್ಪ ಅವರನ್ನು ಉಳಿಸಿಕೊಳ್ಳಲು ಶ್ರಮಿಸಿದೆವು. ಆದರೂ ಉಳಿಸಿಕೊಳ್ಳಲು ಆಗಲಿಲ್ಲ. ಅವರಂತೆ ಮೃತ್ಯುವಿನೊಂದಿಗೆ ಹೋರಾಡಲು ಹುಬ್ಬಳ್ಳಿಯ ಎಲ್ಲರಿಗೂ ಇದೆ. ನಮಗೆಲ್ಲರಿಗೂ ಇದು ಹೆಮ್ಮೆ. ಆದರೆ ಈ ಕಾಂಗ್ರೆಸ್ ಪಕ್ಷವು ಸರ್ಜಿಕಲ್ ಸ್ಟ್ರೈಕ್ ಪ್ರಶ್ನಿಸುತ್ತೆ. 

ಹುಬ್ಬಳ್ಳಿಯ ಜೊತೆಗೆ ನನಗೆ ಭಾವನಾತ್ಮಕ ಸಂಬಂಧ ಇದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.