ಮಂಗಳವಾರ, ಮಾರ್ಚ್ 9, 2021
23 °C

ಹವಾಯ್ ಚಪ್ಪಲಿ ಹಾಕುವವರೂ ವಿಮಾನದಲ್ಲಿ ಓಡಾಡಬೇಕು ಅನ್ನೋದು ನನ್ನ ಕನಸು:ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹವಾಯ್ ಚಪ್ಪಲಿ ಹಾಕುವವರೂ ವಿಮಾನದಲ್ಲಿ ಓಡಾಡಬೇಕು ಅನ್ನೋದು ನನ್ನ ಕನಸು:ಮೋದಿ

ಹುಬ್ಬಳ್ಳಿ: ಹವಾಯ್ ಚಪ್ಪಲಿ ಹಾಕುವವರೂ ವಿಮಾನದಲ್ಲಿ ಓಡಾಡಬೇಕು ಅನ್ನೋದು ನನ್ನ ಕನಸು. ಕಾಯಿಲೆ ಬಂದರೆ ಬಡವರು ಸಾಯಬಾರದು. ಮೆಡಿಕಲ್ ಕಾಲೇಜು, ಸೀಟ್‌ಗಳ ಸಂಖ್ಯೆ ಹೆಚ್ಚಾಗಿದೆ. ಬಡವರ ಚಿಕಿತ್ಸೆಗಾಗಿ ಯೋಜನೆ ಆರಂಭವಾಗಿದೆ ಎಂದು ಮೋದಿ ನುಡಿದರು. 

ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯ, 3 ಕೋಟಿಗೂ ಹೆಚ್ಚು ಜನರಿಗೆ ಬ್ಯಾಂಕ್ ಖಾತೆ, ಎಲ್ಹ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟಿದ್ದೇವೆ. ಈಗ ನನ್ನ ಕನಸು, ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವುದಾಗಿದೆ. ಇದಕ್ಕಾಗಿ ನಾವು ಸೌಭಾಗ್ಯ ಯೋಜನೆ ಜಾರಿ ಮಾಡಿದ್ದೇವೆ. 

ದೇಶದ 4 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಇದಕ್ಕೆ ಯಾರು ಹೊಣೆ? ಕಾಂಗ್ರೆಸ್ ಮಾಡಲಿಲ್ಲ. ಮಹಾತ್ಮ ಗಾಂಧಿ ಅವರ ನೆನಪಿನಲ್ಲಿ ಈ ಎಲ್ಲ ಮನೆಗಳಿಗೆ ನಾವು ವಿದ್ಯುತ್ ಕೊಡುತ್ತೇವೆ. ಇದಕ್ಕೆ ಸಾವಿರಾರು ಕೋಟಿ ಖರ್ಚಾಗುತ್ತೆ. ಆದರೆ ನನಗೆ ನನ್ನ ದೇಶದ ಯಾವುದೇ ವ್ಯಕ್ತಿ ಹಿಂದೆ ಉಳಿಯುವುದು ಇಷ್ಟವಿಲ್ಲ. ಡಿಜಿಟಲ್ ಇಂಡಿಯಾ ನನ್ನ ಕನಸು. ಇದಕ್ಕಾಗಿ ಇಡಿ ದೇಶದಲ್ಲಿ ಒಎಫ್‌ಸಿ ನೆಟ್‌ವರ್ಕ್ ಹಾಕುವ ಕೆಲಸ ಮಾಡುತ್ತಿದ್ದೇವೆ. 

ಸೋನಿಯಾ ಸರ್ಕಾರದಲ್ಲಿಯೂ ಒಎಫ್‌ಸಿ ಕೆಲಸ ಆರಂಭವಾಗಿತ್ತು. ಅದು ಹೇಗೆ ನಡೆಯಿತು ಅಂತ ಗೊತ್ತಾದ್ರೆ ನಿಮಗೆ ಗಾಬರಿ ಆಗುತ್ತೆ. ಕೇವಲ ಮೂರು ವರ್ಷಗಳಲ್ಲಿ ಕೇವಲ 50 ಚಿಲ್ಲರೆ ಗ್ರಾಮಗಳಿಗೆ ಸಂಪರ್ಕ ಸಿಕ್ಕಿತು.ಯುಪಿಎ ಸರ್ಕಾರದಲ್ಲಿ ಮೊಬೈಲ್ ತಯಾರಿಸುವ ಕೇವಲ 2 ಕಂಪೆನಿಗಳಿದ್ದವು. ಈಗ 120 ಕಂಪನಿಗಳಿವೆ.

ಮಿಷನ್ ಇಂದ್ರಧನುಷ್ ಯೋಜನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಶೇ 99ರಷ್ಟು ಮುಗಿಸುತ್ತೇವೆ. ನಾನು ವಿಶ್ವಾಸ ಇಟ್ಟುಕೊಂಡು ಬಂದಿದ್ದೇನೆ. ಆದರೆ ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುರುಡು ವಿಶ್ವಾಸ ಇದೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.