ಸಿಂದಗಿ ಶಾಸಕ ರಮೇಶ ಭೂಸನೂರ ಬಂಧನ; ಬಿಡುಗಡೆ

7

ಸಿಂದಗಿ ಶಾಸಕ ರಮೇಶ ಭೂಸನೂರ ಬಂಧನ; ಬಿಡುಗಡೆ

Published:
Updated:
ಸಿಂದಗಿ ಶಾಸಕ ರಮೇಶ ಭೂಸನೂರ ಬಂಧನ; ಬಿಡುಗಡೆ

ವಿಜಯಪುರ: ಕಾನೂನುಬಾಹಿರವಾಗಿ ಮಾದರಿ ಮತಪತ್ರ ಮುದ್ರಿಸಿ ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡಿದ್ದ ಸಿಂದಗಿ ಶಾಸಕ ರಮೇಶ ಭೂಸನೂರ ಅವರನ್ನು ಬಂಧಿಸಿದ ಪೊಲೀಸರು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. 

ಭೂಸನೂರ ಅವರು ಜೆಡಿಎಸ್ ಅಭ್ಯರ್ಥಿ ಎಂ.ಸಿ.ಮನಗೂಳಿ ಅವರ ಕ್ರಮಸಂಖ್ಯೆ 3 ಬದಲಿಗೆ 2 ಮಾಡಿದ್ದರು. ಹಾಗಾಗಿ ಭೂಸನೂರ ಅವರು ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮನಗೂಳಿ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದರು.

ದೂರಿನ ಅನ್ವಯ ಭೂಸನೂರ ಅವರನ್ನು ಬಂಧಿಸಿದ ಪೊಲೀಸರು, ಯಾರನ್ನೂ ಬೆದರಿಸುವ ಕಾರ್ಯಕ್ಕೆ ಮುಂದಾಗಬಾರದು ಎಂಬ ಷರತ್ತಿನ ಮೇಲೆ ಜಾಮೀನು ನೀಡಿ ಬಿಡುಗಡೆಗೊಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry