‘ಒಮ್ಮೆ ಆಶೀರ್ವದಿಸಿ: ಋಣ ತೀರಿಸುತ್ತೇವೆ’

7
ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶರಣಗೌಡ ಕಂದಕೂರ ಮನವಿ

‘ಒಮ್ಮೆ ಆಶೀರ್ವದಿಸಿ: ಋಣ ತೀರಿಸುತ್ತೇವೆ’

Published:
Updated:

ಯಾದಗಿರಿ: ‘ಅರವತ್ತು ವರ್ಷಗಳಿಂದ ಒಂದೇ ಪಕ್ಷಕ್ಕೆ ಅಧಿಕಾರ ನೀಡಿರುವ ಗುರುಮಠಕಲ್ ಮತದಾರ ಒಂದೇ ಒಂದ್ಸಲ ಜೆಡಿಎಸ್ ಪಕ್ಷಕ್ಕೆ ಆಶೀರ್ವಾದ ಮಾಡಿ. ನಿಮ್ಮ ಋಣವನ್ನು ಮುಂದಿನ ಐದು ವರ್ಷಗಳಲ್ಲಿ ಖಂಡಿತವಾಗಿಯೂ ತೀರಿಸುತ್ತೇವೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶರಣಗೌಡ ಕಂದಕೂರ ಮತದಾರರಿಗೆ ಮನವಿ ಮಾಡಿದರು.

ತಾಲ್ಲೂಕಿನ ಸೈದಾಪುರ ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಶುಕ್ರವಾರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸದಾಶಿವರೆಡ್ಡಿಗೌಡ ಕಂದಕೂರ ಅವರ ಕಾಲದಿಂದಲೂ ಕಂದಕೂರ ಕುಟುಂಬ ಚುನಾವಣೆಗೆ ಸ್ಪರ್ಧಿಸಿ ಹಲವು ಬಾರಿ ಸೋತಿದೆ. ಆದರೂ ಜನರ ಸೇವೆ ಮಾಡುವುದನ್ನು ಆ ಕುಟುಂಬ ಮರೆತಿಲ್ಲ. ಪರಿಹಾರ ಬಯಸಿ ಕಂದಕೂರ ಕುಟುಂಬದ ಬಾಗಿಲು ತಟ್ಟಿದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಎನ್ನದೇ ಪ್ರತಿಯೊಬ್ಬರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಈಗಲಾದರೂ ಕ್ಷೇತ್ರದ ಮತದಾರರು ಬದಲಾವಣೆಯತ್ತ ಮನಸ್ಸು ಮಾಡಬೇಕು’ ಎಂದು ಹೇಳಿದರು.

‘ಆರು ದಶಕಗಳ ಕಾಲ ನಿರಂತರವಾಗಿ ಕ್ಷೇತ್ರವನ್ನು ಆಳಿದ ನಾಯಕರು ತಾವು ಮಾತ್ರ ಅಭಿವೃದ್ಧಿ ಹೊಂದಿದ್ದಾರೆ. ಕ್ಷೇತ್ರದ ಬಹುತೇಕ ಗ್ರಾಮಗಳಿಗೆ ಕನಿಷ್ಠ ಸೌಲಭ್ಯಗಳನ್ನೂ ಕಲ್ಪಿಸಿಲ್ಲ. ಅದರಲ್ಲಿ ಈಗಿನ ಶಾಸಕರಂತೂ ಬರೀ ಬಾಯಿ ಮಾತಲ್ಲೇ ಕಾಲ ಕಳೆಯುತ್ತಾರೆ. ಸುಳ್ಳು ಹೇಳುವುದೇ ಅವರ ದೊಡ್ಡ ಸಾಧನೆಯಾಗಿದೆ’ ಎಂದು ವ್ಯಂಗ್ಯವಾಡಿದರು.

‘ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತ ಹಾಗೂ ಕಂದಕೂರ ಕುಟುಂಬವನ್ನು ನಂಬಿ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರ ಹಿತ ಕಾಪಾಡುವುದು ಮೊದಲ ಆದ್ಯತೆಯಾಗಿದೆ. ಆದರೆ, ಜನಸೇವೆ ಮಾಡುವ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಗನಗೌಡ ಕಂದಕೂರ ಅವರಿಗೆ ಮತ ನೀಡುವ ಮೂಲಕ ಅವರ ಶಕ್ತಿ ಬಲಪಡಿಸಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್ ಮುಖಂಡರಾದ ನಿತ್ಯಾನಂದ ಪೂಜಾರಿ, ಬಸವಂತರಾಯಗೌಡ ಸೈದಾಪುರ, ಸೂಗೂರಪ್ಪ ಸಾಹುಕಾರ ಕಡೇಚೂರ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಮುಖರು: ಚಂದ್ರು ಯಾದವ, ಡಿ.ತಾಯಪ್ಪ, ಜಗದೀಶ ಕಲಾಲ್, ಗುರುನಾಥರೆಡ್ಡಿ ಪಾಟೀಲ, ಚನ್ನಕೇಶ್ವರ ಸ್ವಾಮಿ,  ಗ್ರಾಮ ಪಂಚಾಯಿತಿ ಸದಸ್ಯ ಶಂಕರ ಯಾದವ, ಶಂಕರ ಪೂಜಾರಿ, ಸಿದ್ದು ಪೂಜಾರಿ, ಹಾಜಿಸಾಬ, ಆಂಜನೇಯ, ಡಿ.ರಾಘವೇಂದ್ರ, ವಾಸು, ಮಲ್ಲಪ್ಪ ಸಜ್ಜನ್, ಭೀಮಶಪ್ಪ ಕಾವಲಿ, ಮಹಾದೇವಪ್ಪ ಕಾವಲಿ, ಶೇಖರ ಹಳ್ಳಿ, ಶರಣಪ್ಪ ಹೊನಿಗೇರಾ, ಅಂಜಪ್ಪ ಪ್ಯಾಟಿ ಜೆಡಿಎಸ್‌ಗೆ ಸೇರ್ಪಡೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry