ಕರಣ್‌ ಕಾರ್ಗಿಲ್‌ನಲ್ಲಿ ಸಿದ್ಧಾರ್ಥ್‌

7

ಕರಣ್‌ ಕಾರ್ಗಿಲ್‌ನಲ್ಲಿ ಸಿದ್ಧಾರ್ಥ್‌

Published:
Updated:
ಕರಣ್‌ ಕಾರ್ಗಿಲ್‌ನಲ್ಲಿ ಸಿದ್ಧಾರ್ಥ್‌

ನಿರ್ದೇಶಕ ಕರಣ್‌ ಜೋಹರ್‌ ಕಾರ್ಗಿಲ್‌ ಯುದ್ಧದಲ್ಲಿ ಮಡಿದ ವೀರಯೋಧ ವಿಕ್ರಂ ಬಾತ್ರಾ ಅವರ ಜೀವನಕತೆಯನ್ನು ಆಧರಿಸಿದ ಸಿನಿಮಾವನ್ನು ನಿರ್ದೇಶಿಸಲಿದ್ದು, ಈ ಚಿತ್ರದಲ್ಲಿ ನಟ ಸಿದ್ಧಾರ್ಥ್‌ ಮಲ್ಹೋತ್ರಾ ಅವರು ವಿಕ್ರಮ್‌ ಪಾತ್ರದಲ್ಲಿ ನಟಿಸಲಿದ್ದಾರೆ.

‘ಸ್ಟೂಡೆಂಟ್‌ ಆಫ್ ದ ಇಯರ್‌’ ಚಿತ್ರದ ಮೂಲಕ ಕರಣ್‌ ಅವರು ಸಿದ್ಧಾರ್ಥ್‌ ಮಲ್ಹೋತ್ರಾ ಅವರನ್ನು ಬಾಲಿವುಡ್‌ಗೆ ಪರಿಚಯಿಸಿದ್ದರು. ಈಗ ಮತ್ತೊಂದು ಮಹಾತ್ವಾಕಾಂಕ್ಷೆ ಚಿತ್ರದಲ್ಲಿ ಸಿದ್ಧಾರ್ಥ್‌ ನಾಯಕನಟನಾಗಿ ನಟಿಸಲಿದ್ದಾರೆ.

‘ವಿಕ್ರಮ್‌ ಬಾತ್ರಾ ಅವರು ‘ಷೇರ್‌ ಷಾ’ ಎಂದೇ ಖ್ಯಾತ. ಅವರ ಜೀವನ ಎಲ್ಲರಿಗೂ ಸ್ಪೂರ್ತಿ. ವಿಕ್ರಮ್‌ ಪಾತ್ರ ನಿರ್ವಹಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಇದೇ ವರ್ಷದಲ್ಲಿ ಚಿತ್ರೀಕರಣ ಆರಂಭವಾಗಲಿದೆ’ ಎಂದು ಸಿದ್ಧಾರ್ಥ್‌ ಖುಷಿ ಹಂಚಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry