ತಾಯಿಯಂತೆ ಮಗಳು!

7

ತಾಯಿಯಂತೆ ಮಗಳು!

Published:
Updated:
ತಾಯಿಯಂತೆ ಮಗಳು!

‘ನೂಲಿನಂತೆ ಸೀರೆ, ತಾಯಿಯಂತೆ ಮಗಳು’ ಎಂಬುದು ಗಾದೆಯ ಮಾತು. ಈ ಮಾತು ನಟಿ ಜಾಹ್ನವಿ ಕಪೂರ್ ಸರಿಯಾಗಿ ಹೊಂದುತ್ತದೆ. ವಿಷಯ ಏನೆಂದರೆ, ಇತ್ತೀಚೆಗೆ ನಡೆದ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ನಟ ಬೋನಿಕಪೂರ್ ತಮ್ಮ ಮಕ್ಕಳಾದ ಜಾಹ್ನವಿ ಮತ್ತು ಖುಷಿ ಜತೆ ಭಾಗವಹಿಸಿದ್ದರು. ಆ ಸಮಾರಂಭಕ್ಕೆ ಜಾಹ್ನವಿ ಅಮ್ಮನ ರೇಷ್ಮೆ ಸೀರೆ ಉಟ್ಟಿದ್ದರೆ, ಖುಷಿ ಲಂಗ–ದಾವಣಿಯಲ್ಲಿ ಮಿಂಚುತ್ತಿದ್ದಳು.

ಜಾಹ್ನವಿ ಅಮ್ಮನ ಸೀರೆ ಉಟ್ಟಿದ್ದಷ್ಟೇ ಅಲ್ಲ, ಅಮ್ಮನ ಜವಾಬ್ದಾರಿಯನ್ನೂ ಹೊತ್ತವಳಂತೆ ಅಂದು ನಡೆದುಕೊಂಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ.

ಅಂದಿನ ಸಮಾರಂಭದಲ್ಲಿ ಬೋನಿಕಪೂರ್ ಸೆಕೆ ತಾಳಲಾರದೆ ಬೆವತಿದ್ದಾಗ ಅಪ್ಪನ ಹಣೆಯ ಮೇಲಿನ ಬೆವರ ಹನಿಗಳನ್ನು ಮಗಳು ಜಾಹ್ನವಿ ಬಿಳಿ ಕರ್ಚೀಫಿನಿಂದ ಒರೆಸುತ್ತಿರುವ ಚಿತ್ರ ವೈರಲ್ ಆಗಿದೆ. ಈ ಚಿತ್ರದ ಜತೆಗೆ 2013ರ ಫಿಲಂಫೇರ್ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೋನಿಕಪೂರ್ ಹಣೆ ಮೇಲಿನ ಬೆವರನ್ನು ಶ್ರೀದೇವಿ ಒರೆಸುತ್ತಿರುವ ಚಿತ್ರವನ್ನು ಹೋಲಿಕೆ ಮಾಡಲಾಗಿದೆ.

ಮಗಳ ಕಾಳಜಿ, ಪ್ರೀತಿಗೆ ತಲೆಬಾಗಿರುವ ಅಪ್ಪ ಬೋನಿ ಕಪೂರ್ ಭಾವುಕವಾಗಿದ್ದರೆ, ಇತ್ತ ಶ್ರೀದೇವಿ ಅಭಿಮಾನಿಗಳು, ಜಾಹ್ನವಿಯಲ್ಲಿ ಶ್ರೀದೇವಿಯ ಪ್ರತಿರೂಪ ಕಂಡು ಮೂಕವಿಸ್ಮಿತರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry