ಮಾಧುರಿ ‘ಬಕೆಟ್ ಲಿಸ್ಟ್‌’ನಲ್ಲಿ ಏನಿದೆ?

7

ಮಾಧುರಿ ‘ಬಕೆಟ್ ಲಿಸ್ಟ್‌’ನಲ್ಲಿ ಏನಿದೆ?

Published:
Updated:
ಮಾಧುರಿ ‘ಬಕೆಟ್ ಲಿಸ್ಟ್‌’ನಲ್ಲಿ ಏನಿದೆ?

‘ಬಕೆಟ್‌ ಲಿಸ್ಟ್’ ಮಾಡಬೇಕಾದ ಕೆಲಸಗಳ ಪಟ್ಟಿ, ಕಂಡ ಕನಸುಗಳ ಪಟ್ಟಿ...ಹಾಗಂತ ಕನ್ನಡದಲ್ಲಿ ಕರೆಯಬಹುದೇನೋ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲವುಳ್ಳವರು ಪಕ್ಕಾ ವೇಳಾಪಟ್ಟಿಯೊಂದನ್ನು ಸಿದ್ಧಪಡಿಸಿಟ್ಟುಕೊಂಡ ಪಟ್ಟಿಯೇ ಬಕೆಟ್ ಲಿಸ್ಟ್. ಇಂಥದ್ದೊಂದು ಪಟ್ಟಿ ತಯಾರಿಸಿಕೊಂಡು ಅಕಾಲಿಕ ಸಾವಿಗೀಡಾದ ಯುವತಿಯೊಬ್ಬಳ ಆಸೆಗಳನ್ನು ಪೂರೈಸುವ ಪಾತ್ರವನ್ನು ಮಾಧುರಿ ದೀಕ್ಷಿತ್ ‘ಬಕೆಟ್ ಲಿಸ್ಟ್’ ಸಿನಿಮಾದಲ್ಲಿ ಮಾಡಿದ್ದಾರೆ. ಅಂದಹಾಗೆ ಇದು ಮಾಧುರಿ ಅಭಿನಯದ ಪ್ರಥಮ ಮರಾಠಿ ಚಿತ್ರ ಅನ್ನುವುದು ವಿಶೇಷ.

ತನ್ನ ಫಸ್ಟ್‌ಲುಕ್‌ನ ಪೋಸ್ಟರ್‌ನಿಂದಲೇ ಗಮನ ಸೆಳೆದಿದ್ದ ‘ಬಕೆಟ್ ಲಿಸ್ಟ್‌’, ಈಗ ಟೀಸರ್ ಮೂಲಕ ಚಿತ್ರದ ಕುರಿತು ಮತ್ತಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಎರಡು ಮಕ್ಕಳ ತಾಯಿಯಾಗಿ ಕಾಣಿಸಿಕೊಂಡಿರುವ ಮಾಧುರಿಯ ಸೌಂದರ್ಯ ಇನ್ನೂ ಮುಕ್ಕಾಗಲಿಲ್ಲ ಎಂಬುದನ್ನು ಚಿತ್ರದ ಟ್ರೇಲರ್ ಹೇಳುತ್ತದೆ. ನಗುಮೊಗದ ತಾಯಿಯಾಗಿ, ಹೆಂಡತಿಯಾಗಿ ಯುವಜನರ ಜತೆ ಲವಲವಿಕೆಯಿಂದ ನಟಿಸಿರುವ ಮಾಧುರಿಯ ತುಂಟತನದ ನಗು ಮೋಡಿ ಮಾಡುವಂತಿದೆ. ಈ ಸಿನಿಮಾದ ಪಾತ್ರಕ್ಕಾಗಿ ಮಾಧುರಿ ಬೈಕ್ ರೈಡಿಂಗ್ ಕಲಿತಿದ್ದಾರೆ. ತಲೆಗೆ ಹೆಲ್ಮೆಟ್, ಮೈಗೆ ಕಪ್ಪು ಜಾಕೆಟ್ ಹಾಕಿಕೊಂಡು ರ‍್ಯಾಂಬೊ ಲುಕ್‌ನಲ್ಲಿ ಮಾಧುರಿ ಹೆಂಗಳೆಯರ ಮನ ಕದ್ದಿದ್ದಾರೆ.

‘ಸಾಯಿ’ ಎನ್ನುವ ಯುವತಿಯ ಬಕೆಟ್‌ ಲಿಸ್ಟ್‌ಗಳನ್ನು ಪೂರ್ಣಗೊಳಿಸಲು ಪಣ ತೊಟ್ಟ ಹೆಣ್ಣಾಗಿ ಚಿತ್ರದುದ್ದಕ್ಕೂ ಕಾಣಿಸಿಕೊಂಡಿರುವ ಮಾಧುರಿ ತಮ್ಮ ಪ್ರಬುದ್ಧ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಜತೆಜತೆಗೆ ಸಾಮಾನ್ಯ ಗೃಹಿಣಿಯರ ಆಸೆ–ಆಕ್ಷಾಂಕ್ಷೆಗಳ ಪ್ರತಿನಿಧಿಯಂತೆಯೂ ಗೋಚರಿಸುತ್ತಾರೆ. ತೇಜಸ್‌ಪ್ರಭ ವಿಜಯ್ ದಿಯೊಸ್ಕರ್ ನಿರ್ದೇಶನದ ‘ಬಕೆಟ್ ಲಿಸ್ಟ್ ಮೇ 25ಕ್ಕೆ ಬಿಡುಗಡೆಯಾಗಲಿದೆ. ಟ್ರೇಲರ್ ಅನ್ನು ಮೂವತ್ತೈದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಟ್ರೇಲರ್ ಕೊಂಡಿ:https://youtu.be/Rlmxohf1i_8

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry