ವ್ಯವಸ್ಥೆ ಕಲ್ಪಿಸಿ

7

ವ್ಯವಸ್ಥೆ ಕಲ್ಪಿಸಿ

Published:
Updated:

ಉಡುಪಿಗೆ ಬರುವ ಪ್ರವಾಸಿಗರಿಗೆ ಮಲ್ಪೆ ಸಮೀಪದ ‘ಸೇಂಟ್ ಮೇರಿ’ ದ್ವೀಪ ಪ್ರಮುಖ ಆಕರ್ಷಣೆ. ಸಮುದ್ರ ತೀರದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರವಿರುವ ಈ ದ್ವೀಪಕ್ಕೆ ಬೋಟ್ ಮುಖಾಂತರ ಪಯಣಿಸುವ ವ್ಯವಸ್ಥೆಯಿದೆ. ಈ ಸಮುದ್ರಯಾನವೂ ಪ್ರವಾಸಿಗರಿಗೆ ರೋಚಕ ಅನುಭವವೇ ಸರಿ.

ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಇಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ಇದನ್ನು ಇನ್ನಷ್ಟು ಆಕರ್ಷಣೆಯ ಕೇಂದ್ರವಾಗಿಸಬಹುದಿತ್ತು. ಪ್ರಸಕ್ತ ಈ ತಾಣದಲ್ಲಿ ಸೌಲಭ್ಯಗಳ ಕೊರತೆ ಇದೆ. ಮಲ್ಪೆಯಿಂದ ಈ ದ್ವೀಪಕ್ಕೆ ಬೋಟ್‌ಗಳಲ್ಲಿ ಹೋಗಿ ಬರಲು ₹ 300 ದರ ನಿಗದಿ ಮಾಡಲಾಗಿದೆ. ಬೋಟ್‌ನಿಂದ ಆ ದ್ವೀಪದ ತೀರದಲ್ಲಿ ಇಳಿಯಲು ಸರಿಯಾದ ವ್ಯವಸ್ಥೆ ಇಲ್ಲ. ವಯಸ್ಸಾದವರು, ಮಕ್ಕಳು ಹಾಗೂ ಮಹಿಳೆಯರಿಗೆಬೋಟ್‌ನಿಂದ ಇಳಿಯುವುದು ಕಷ್ಟವಾಗುತ್ತಿದೆ. ಈ ‘ದ್ವೀಪ’ ಪ್ರದೇಶವನ್ನು ಸ್ವಚ್ಛವಾಗಿ ಇಡಲಾಗಿದೆ ಎಂಬುದೊಂದೇ ಸಂತೋಷದ ವಿಚಾರ. ಆದರೆ, ಅಲ್ಲಿರುವ ಶೌಚಾಲಯಕ್ಕೆ ₹ 10 ಶುಲ್ಕ ನಿಗದಿಪಡಿಸಿದ್ದಾರೆ. ಸಾಮಾನ್ಯ ಪ್ರವಾಸಿಗರಿಗೆ ಇದು ದುಬಾರಿಯೇ. ಸಂಬಂಧಪಟ್ಟವರು ಇಲ್ಲಿನ ಸೌಲಭ್ಯಗಳನ್ನು ಸರಿಪಡಿಸಲು ಗಮನಹರಿಸಬೇಕು.

-ಬಿ.ಎಸ್. ತಿಮ್ಮೋಲಿ, ಶಿವಮೊಗ್ಗ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry