ರಾಜದಂಪತಿ ಮಗನ ಚಿತ್ರ ಬಿಡುಗಡೆ

ಲಂಡನ್ : ಯುವರಾಜ ವಿಲಿಯಂ ಮತ್ತು ಕೇಟ್ ಮಿಡ್ಲ್‌ಟನ್ ದಂಪತಿಗೆ ಈಚೆಗೆ ಜನಿಸಿದ ಮೂರನೆ ಮಗು ಲೂಯಿಸ್‌ನ ಭಾವಚಿತ್ರವನ್ನು ರಾಜಮನೆತನವು ಭಾನುವಾರ ಬಿಡುಗಡೆ ಮಾಡಿದೆ.
ಕೆನ್ಸಿಂಗ್ಟನ್ ಅರಮನೆಯ ನಿವಾಸದಲ್ಲಿ ಮಿಡ್ಲ್‌ಟನ್ ಸೆರೆ ಹಿಡಿದಿರುವ ಭಾವಚಿತ್ರಗಳು ಇವಾಗಿವೆ. ಒಂದು ಚಿತ್ರದಲ್ಲಿ ಈ ದಂಪತಿಯ ಮೂರು ವರ್ಷದ ಮಗಳು ಚಾರ್ಲೊಟ್, ಮಲಗಿರುವ ಲೂಯಿಸ್‌ಗೆ ಮುತ್ತಿಡುತ್ತಿರುವ ದೃಶ್ಯವಿದ್ದು, ಇದನ್ನು ಮೇ 2ರಂದು ಸೆರೆ ಹಿಡಿಯಲಾಗಿದೆ. ಇನ್ನೊಂದರಲ್ಲಿ ಆ ಮಗು ಕಣ್ಣು ಬಿಟ್ಟು ಎತ್ತಲೋ ನೋಡುತ್ತಿದ್ದು, ಅದು ಏಪ್ರಿಲ್ 26ರಂದು ಸೆರೆಹಿಡಿದ ಭಾವಚಿತ್ರವಾಗಿದೆ.
‘ಚಾರ್ಲೊಟ್ ಮತ್ತು ಲೂಯಿಸ್ ಅವರ ಭಾವಚಿತ್ರಗಳನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ’ ಎಂದು ಅರಮನೆಯ ಪ್ರಕಟಣೆ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.