ಟೆನಿಸ್: ಜ್ವೆರೆವ್‌ಗೆ ಪ್ರಶಸ್ತಿ

ಮ್ಯೂನಿಚ್, ಜರ್ಮನಿ: ಮಿಂಚಿನ ಆಟ ಆಡಿದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರು ಎಟಿಪಿ ಮ್ಯೂನಿಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಜ್ವೆರೆವ್ 6–3, 6–3ರ ನೇರ ಸೆಟ್‌ಗಳಿಂದ ಫಿಲಿಪ್ ಕೊಹ್ಲ್‌ಶ್ರಿಬರ್ ಅವರನ್ನು ಸೋಲಿಸಿದರು. ಇದ ರೊಂದಿಗೆ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದ ಹಿರಿಮೆ ತಮ್ಮದಾಗಿಸಿಕೊಂಡರು.
2017ರಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿ ಜ್ವೆರೆವ್ ಅವರು ಅರ್ಜೆಂಟೀನಾದ ಗುಯಿಡೊ ಪೆಲ್ಲಾ ಅವರನ್ನು ಮಣಿಸಿದ್ದರು.
ಮೊದಲ ಸೆಟ್‌ನ ಆರಂಭದ ಆರು ಗೇಮ್‌ಗಳಲ್ಲಿ ಎದುರಾಳಿ ಯಿಂದ ಪ್ರಬಲ ಪೈಪೋಟಿ ಎದುರಿ ಸಿದ ಜ್ವೆರೆವ್ ನಂತರ ಮೋಡಿ ಮಾಡಿದರು. ಜ್ವೆರೆವ್ ರ‍್ಯಾಕೆಟ್‌ನಿಂದ ಸಿಡಿಯುತ್ತಿದ್ದ ಶರವೇಗದ ಸರ್ವ್ ಗಳನ್ನು ಹಿಂತಿರುಗಿಸಲು ಫಿಲಿಪ್ ಪ್ರಯಾಸಪಟ್ಟರು. ಎರಡನೇ ಸೆಟ್‌ನ ಶುರುವಿನಲ್ಲಿ ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ನಂತರ ಜ್ವೆರೆವ್ ಮೇಲುಗೈ ಸಾಧಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.