ಪ್ರತಿಭಾಗೆ ಪ್ರಶಸ್ತಿ

7

ಪ್ರತಿಭಾಗೆ ಪ್ರಶಸ್ತಿ

Published:
Updated:

ಬೆಂಗಳೂರು: ಕರ್ನಾಟಕದ ಪ್ರತಿಭಾ ಅವರು ಗೋಕಲ್‌ದಾಸ್‌ ಲೈಫ್‌ಸ್ಟೈಲ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಪ್ರತಿಭಾ ಅವರು ಫೈನಲ್‌ನಲ್ಲಿ ಆಂಧ್ರಪ್ರದೇಶದ ಸಾಯಿ ದೀದಿಪಿಯಾ ಅವರನ್ನು 6–0, 6–3ರ ಸೆಟ್‌ಗಳಿಂದ ಸೋಲಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ತಮಿಳುನಾಡಿನ ವಿ. ಎಂ. ರಂಜೀತ್‌, ಆಂಧ್ರಪ್ರದೇಶದ ನಿಕಿತ್‌ ರೆಡ್ಡಿ ಅವರನ್ನು 6–2, 6–2ರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ‌

ಕರ್ನಾಟಕದ ಬಿ.ಆರ್‌.ನಿಕ್ಷೇಪ್‌ ಹಾಗೂ ಮಧ್ಯಪ್ರದೇಶದ ಯಶ್‌ ಯಾದವ್‌ ಜೋಡಿಯು ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದೆ.

ಫೈನಲ್‌ ಪಂದ್ಯದಲ್ಲಿ ಈ ಜೋಡಿಯು ತೆಲಂಗಾಣದ ಶೇಖ್‌ ಒಸಾಮಾ ಮತ್ತು ಮಹಾರಾಷ್ಟ್ರದ ರೋಹನ್‌ ಭಾಟಿಯಾ ಜೋಡಿಯನ್ನು 6–3, 6–2ರ ಸೆಟ್‌ಗಳಿಂದ ಮಣಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry