ಮೋದಿ ಬಂದ ಮೇಲೆ ಹಿಂದೂಗಳಿಗೂ ನೆಮ್ಮದಿ ಇಲ್ಲ: ಆಜಾದ್

7

ಮೋದಿ ಬಂದ ಮೇಲೆ ಹಿಂದೂಗಳಿಗೂ ನೆಮ್ಮದಿ ಇಲ್ಲ: ಆಜಾದ್

Published:
Updated:

ಶಿವಮೊಗ್ಗ: ‘ನರೇಂದ್ರ ಮೋದಿ ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಮುಸ್ಲಿಮರಿಗಷ್ಟೇ ಅಲ್ಲ, ಹಿಂದೂಗಳಿಗೂ ನೆಮ್ಮದಿ ಇಲ್ಲದಂತಾಗಿದೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ದೂರಿದರು.

ನಗರದಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನ ಕುಮಾರ್ ಪರ ಮತ ಯಾಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಿಜೆಪಿಯ ವಾಜಪೇಯಿ ಅವರು 6 ವರ್ಷ ಪ್ರಧಾನಿಯಾಗಿದ್ದರು. ಮುತ್ಸದ್ದಿಯಾದ ಅವರ ಅವಧಿಯಲ್ಲಿ ಎಂದೂ ದೇಶದ ನೆಮ್ಮದಿಗೆ ಭಂಗವಾಗಲಿಲ್ಲ. ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ ಜನರ ಅಡುಗೆ ಮನೆಯಲ್ಲಿ ಯಾವ ಆಹಾರ ಇದೆ, ಏನು ತಿನ್ನುತ್ತಾರೆ ಎಂಬುದೂ ಮಹತ್ವದ ವಿಷಯವಾಗಿದೆ. ಅದಕ್ಕಾಗಿ ಹತ್ಯೆಗಳೂ ನಡೆದಿವೆ. ದೇಶದಲ್ಲಿ ಶಾಂತಿ ಇಲ್ಲವಾಗಿದೆ’ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry