ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನಲ್ಲಿ ಮನೆ ಬಾಗಿಲಿಗೆ ಡೀಸೆಲ್‌

ಸೇವೆಗೆ ಚಾಲನೆ ನೀಡಿದ ಹಿಂದೂಸ್ತಾನ್‌ ಪೆಟ್ರೋಲಿಯಂ
Last Updated 6 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಎಚ್‌ಪಿಸಿಎಲ್‌), ಮುಂಬೈ
ನಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಡೀಸೆಲ್‌ ಪೂರೈಸುವ ಸೇವೆಗೆ ಚಾಲನೆ ನೀಡಿದೆ.

ಈ ರೀತಿಯ ಸೇವೆ ಒದಗಿಸುತ್ತಿರುವ ಎರಡನೇ ತೈಲ ಕಂಪನಿ ಇದಾಗಿದೆ. ಇದಕ್ಕೂ ಮೊದಲು ಅಂದರೆ ಮಾರ್ಚ್ ತಿಂಗಳಿನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಈ ಸೇವೆಗೆ ಚಾಲನೆ ನೀಡಿತ್ತು.

ಮಹಾರಾಷ್ಟ್ರದ ರಾಯಗಡದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ‘ಎಚ್‌ಪಿ ಫ್ಯೂಯೆಲ್‌ ಕನೆಕ್ಟ್‌’ ವಾಹನವು ಭಾರಿ ಯಂತ್ರೋಪಕರಣಗಳನ್ನು ಹೊಂದಿರುವ ಗ್ರಾಹಕರಿಗೆ ಡೀಸೆಲ್‌ ವಿತರಿಸಲಿದೆ. ಷಾಪಿಂಗ್‌ ಮಾಲ್‌ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ವಿದ್ಯುತ್‌ ವ್ಯತ್ಯಯ ಆದಾಗ ಡೀಸೆಲ್‌ ಜನರೇಟರ್‌ ಬಳಸಲಾಗುತ್ತದೆ. ಈ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕಂಪನಿ ಈ ಸೇವೆಗೆ ಚಾಲನೆ ನೀಡಿದೆ. ಇದರಿಂದ ಸಮಯದ ಜತೆಗೆ ಸಾಗಣೆ ವೆಚ್ಚವೂ ಕಡಿಮೆ ಆಗಲಿದೆ. ಸುರಕ್ಷಿತ ಸಾಗಣೆಯೂ ಸಾಧ್ಯವಾಗಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT