ಶುಕ್ರವಾರ, ಮಾರ್ಚ್ 5, 2021
29 °C
ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿ: ಮಿಂಚಿದ ಇರಿನಾ

ಜೆಲೆನಾ, ವೀನಸ್‌ಗೆ ಆಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಲೆನಾ, ವೀನಸ್‌ಗೆ ಆಘಾತ

ಮ್ಯಾಡ್ರಿಡ್‌ (ಎಎಫ್‌ಪಿ/ರಾಯಿಟರ್ಸ್‌): ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಐದನೇ ಸ್ಥಾನ ಹೊಂದಿರುವ ಜೆಲೆನಾ ಒಸ್ತಾಪೆಂಕೊ ಮತ್ತು ಎಂಟನೇ ಸ್ಥಾನದಲ್ಲಿರುವ ವೀನಸ್‌ ವಿಲಿಯಮ್ಸ್‌ ಅವರು ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಆಘಾತ ಕಂಡಿದ್ದಾರೆ.

ಶನಿವಾರ ನಡೆದ ಹಣಾಹಣಿಯಲ್ಲಿ ಲಾಟ್ವಿಯಾದ ಜೆಲೆನಾ 3–6, 3–6ರಲ್ಲಿ ರುಮೇನಿಯಾದ ಇರಿನಾ ಕ್ಯಾಮಿಲಾ ಬೇಗು ವಿರುದ್ಧ ಸೋತರು.

ಶ್ರೇಯಾಂಕ ರಹಿತ ಆಟಗಾರ್ತಿ ಇರಿನಾ ಎರಡು ಸೆಟ್‌ಗಳಲ್ಲೂ ಮಿಂಚಿನ ಆಟ ಆಡಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಅಮೆರಿಕದ ಆಟಗಾರ್ತಿ ವೀನಸ್‌ 6–3, 3–6, 2–6ರಲ್ಲಿ ಎಸ್ಟೋನಿಯಾದ ಅನೆಟ್‌ ಕೊಂಥಾವೀಟ್‌ ಎದುರು ಪರಾಭವಗೊಂಡರು.

ವೀನಸ್‌, ಮೊದಲ ಸೆಟ್‌ನಲ್ಲಿ ಅಮೋಘ ಆಟ ಆಡಿ ಗೆದ್ದರು. ಇದರಿಂದ ಎದೆಗುಂದದ ಅನೆಟ್‌, ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಛಲದಿಂದ ಹೋ ರಾಡಿ ಎದುರಾಳಿಯನ್ನು ಮಣಿಸಿದರು.

ಸ್ವಿಟೋಲಿನಾ ಶುಭಾರಂಭ: ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಎಲಿನಾ ಸ್ವಿಟೋಲಿನಾ ಶುಭಾರಂಭ ಮಾಡಿದರು.

ಮೊದಲ ಸುತ್ತಿನ ಹೋರಾಟದಲ್ಲಿ ಉಕ್ರೇನ್‌ನ ಎಲಿನಾ 6–2, 6–2ರಲ್ಲಿ ಫ್ರಾನ್ಸ್‌ನ ಅಲೈಜ್‌ ಕಾರ್ನೆಟ್‌ ವಿರುದ್ಧ ಗೆದ್ದರು. ರುಮೇನಿಯಾದ ಸಿಮೊನಾ ಹಲೆಪ್‌ 6–1, 6–0ರಲ್ಲಿ ಏಕ್ತರಿನಾ ಮಕರೋವಾ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.

ಇತರ ಪಂದ್ಯಗಳಲ್ಲಿ ಗಾರ್ಬೈನ್‌ ಮುಗುರುಜಾ 6–4, 6–2ರಲ್ಲಿ ಪೆಂಗ್‌ ಶೂಯಿ ಎದುರೂ, ಮರಿಯಾ ಶರಪೋವಾ 6–4, 6–1ರಲ್ಲಿ ಮಿಹಯೆಲಾ ಬುಜಾರ್ನೆಸ್ಕು ಮೇಲೂ, ಕ್ಯಾರೋಲಿನಾ ಪ್ಲಿಸ್ಕೋವಾ 6–4, 6–2ರಲ್ಲಿ ಎಲಿನಾ ವೆಸ್ನಿನಾ ಎದುರೂ, ಡೇರಿಯಾ ಕಸತ್ಕಿನಾ 7–5, 7–6ರಲ್ಲಿ ವಾಂಗ್‌ ಕ್ವಿಯಾಂಗ್‌ ವಿರುದ್ಧವೂ, ಕ್ಯಾರೋಲಿನಾ ಗಾರ್ಸಿಯಾ 6–1, 7–5ರಲ್ಲಿ ಡೊಮಿನಿಕಾ ಸಿಬುಲ್ಕೋವಾ ಎದುರೂ, ಪೆಟ್ರಾ ಮಾರ್ಟಿಕ್‌ 6–4, 6–2ರಲ್ಲಿ ಸ್ವೆಟ್ಲಾನಾ ಕುಜ್ನೆತ್ಸೋವಾ ವಿರುದ್ಧವೂ, ಲಾರಾ ಆ್ಯರುಬರೆನಾ 6–3, 4–6, 6–2ರಲ್ಲಿ ಮಾರ್ಟಾ ಕೊಸ್ತ್ಯುಕ್‌ ಮೇಲೂ, ಕ್ರಿಸ್ಟಿನಾ ಮ್ಲಾಡೆನೊವಿಚ್‌ 7–5, 6–0ರಲ್ಲಿ ಕೊಕೊ ವೆಂಡೆವೆಘೆ ಎದುರೂ, ಕಿಕಿ ಬರ್ಟೆನ್ಸ್‌ 6–4, 6–4ರಲ್ಲಿ ಮರಿಯಾ ಸಕಾರಿ ವಿರುದ್ಧವೂ ಜಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.