ಲೀ ಬಾಕ್ಸ್‌ಟರ್‌ ಜೊತೆ ನೀರಜ್‌ ಒ‍ಪ್ಪಂದ

7

ಲೀ ಬಾಕ್ಸ್‌ಟರ್‌ ಜೊತೆ ನೀರಜ್‌ ಒ‍ಪ್ಪಂದ

Published:
Updated:
ಲೀ ಬಾಕ್ಸ್‌ಟರ್‌ ಜೊತೆ ನೀರಜ್‌ ಒ‍ಪ್ಪಂದ

ನವದೆಹಲಿ: ಭಾರತದ ಬಾಕ್ಸರ್‌ ನೀರಜ್ ಗೋಯತ್‌ ಅವರು ಭಾನುವಾರ ಕೆನಡಾದ ಲೀ ಬಾಕ್ಸ್‌ಟರ್‌ ಪ್ರೊಮೋಷನ್ಸ್‌ ಸಂಸ್ಥೆಯೊಂದಿಗೆ ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ.

ನೀರಜ್‌ ಅವರು ವೃತ್ತಿಪರ ಬಾಕ್ಸಿಂಗ್‌ನಲ್ಲಿ ಒಟ್ಟು 13 ಹಣಾಹಣಿಗಳಲ್ಲಿ ಭಾಗವಹಿಸಿದ್ದಾರೆ. ಈ ಪೈಕಿ ಒಂಬತ್ತರಲ್ಲಿ ಗೆದ್ದಿದ್ದಾರೆ.

ಲೀ ಬಾಕ್ಸ್‌ಟರ್‌ ಪರ ಅವರು ಜೂನ್‌ 26 ರಂದು ಮೊದಲ ಪಂದ್ಯ ಆಡುವ ಸಾಧ್ಯತೆ ಇದೆ. ಅವರ ಎದುರಾಳಿ ಯಾರು ಎಂಬುದು ಇನ್ನು ತಿಳಿದಿಲ್ಲ.

26ರ ಹರೆಯದ ನೀರಜ್‌, 2016 ಆಗಸ್ಟ್‌ನಲ್ಲಿ ಕೊನೆಯ ಪಂದ್ಯ ಆಡಿದ್ದರು. ಡಬ್ಲ್ಯುಬಿಸಿ ಏಷ್ಯಾ ಪೆಸಿಫಿಕ್‌ ವೆಲ್ಟರ್‌ವೇಟ್‌ ಪ್ರಶಸ್ತಿಗಾಗಿ ನಡೆದಿದ್ದ ಪೈಪೋಟಿಯಲ್ಲಿ ನೀರಜ್‌, ಅಲನ್‌ ಟನಾಡ ಅವರನ್ನು ಸೋಲಿಸಿದ್ದರು.

‘ಲೀ ಬಾಕ್ಸ್‌ಟರ್‌ ಪ್ರೊಮೋಷನ್ಸ್‌ ಜೊತೆ ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದೇನೆ. ಅವರು ಎಷ್ಟು ಮೊತ್ತ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡುವುದಿಲ್ಲ. ಜೂನ್‌ 26ರಂದು ಮೊದಲ ಹಣಾಹಣಿ ನಡೆಯುವ ನಿರೀಕ್ಷೆ ಇದೆ. ಎದುರಾಳಿ ಯಾರು ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ’ ಎಂದು ನೀರಜ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry