ಸೆಲ್ಫಿ ವಿಡಿಯೊ ಮಾಡಿ ಆತ್ಮಹತ್ಯೆ

7

ಸೆಲ್ಫಿ ವಿಡಿಯೊ ಮಾಡಿ ಆತ್ಮಹತ್ಯೆ

Published:
Updated:

ಬೆಂಗಳೂರು: ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೊ ಚಾಲು ಮಾಡಿಟ್ಟು ಅಜಿತ್ ಕುಮಾರ್ (23) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿಹಾರದ ಅವರು, ಉದ್ಯೋಗ ಹುಡುಕಿಕೊಂಡು 6 ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಎಲೆಕ್ಟ್ರಿಷಿಯನ್‌ ಕೆಲಸಕ್ಕೆ ಸೇರಿದ್ದರು. ಮುನ್ನೇ

ಕೊಳಲು ಬಳಿ ಸ್ನೇಹಿತರ ಜತೆ ಶೆಡ್‌ ಒಂದರಲ್ಲಿ ನೆಲೆಸಿದ್ದರು. ಅದೇ ಶೆಡ್‌ನಲ್ಲಿ ಮೇ 4ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾರತ್ತಹಳ್ಳಿ ಪೊಲೀಸರು ತಿಳಿಸಿದರು.

‘ಸ್ನೇಹಿತರು ಕೆಲಸಕ್ಕೆ ಹೋಗಿದ್ದರು. ಹುಷಾರಿಲ್ಲವೆಂದು ಅಜಿತ್‌, ಶೆಡ್‌ನಲ್ಲೇ ಉಳಿದುಕೊಂಡಿದ್ದರು. ನಂತರ, ತಮ್ಮ ಮೊಬೈಲ್‌ನ ಸೆಲ್ಫಿ ವಿಡಿಯೊ ಚಾಲು ಮಾಡಿ ಎದುರು ನಿಂತು ‘ಐ ಲವ್‌ ಯು’ ಅಂತಾ ಎರಡ್ಮೂರು ಬಾರಿ ಹೇಳಿದ್ದಾರೆ. ಬಳಿಕ, ಕುತ್ತಿಗೆಗೆ ಹಗ್ಗ ಬಿಗಿದುಕೊಂಡು ನೇಣು ಹಾಕಿಕೊಂಡಿದ್ದಾರೆ’ ಎಂದರು.

‘ಸಂಜೆ ಕೆಲಸ ಮುಗಿಸಿ ಸ್ನೇಹಿತರು ಶೆಡ್‌ಗೆ ವಾಪಸ್ ಬಂದಾಗ ವಿಷಯ ಗೊತ್ತಾಗಿದೆ. ಸ್ಥಳದಲ್ಲಿ ಸಿಕ್ಕಿದ ಮೊಬೈಲ್‌ ಪರಿಶೀಲಿಸಿದಾಗ, 5 ನಿಮಿಷಗಳ ವಿಡಿಯೊ ಇತ್ತು. ಅಜಿತ್‌, ನೇಣು ಹಾಕಿಕೊಂಡು ಪ್ರಾಣ ಬಿಡುವವರೆಗಿನ ದೃಶ್ಯ ವಿಡಿಯೊದಲ್ಲಿದೆ’ ಎಂದು ಪೊಲೀಸರು ವಿವರಿಸಿದರು.

ಶವ ಒಯ್ಯಲು ಪೋಷಕರ ನಿರಾಕರಣೆ: ಶವ ತೆಗೆದುಕೊಂಡು ಹೋಗಲು ಪೋಷಕರು ನಿರಾಕರಿಸಿದರು. ಹಾಗಾಗಿ, ನಾವೇ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry