ಸೋಮವಾರ, ಮಾರ್ಚ್ 27, 2023
24 °C

ಜನಸೇವೆ ಮಾಡಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಸೇವೆ ಮಾಡಬೇಕು

ಚುನಾವಣೆಗೆ ಮೊದಲು ಮತ ಕೇಳಲು ಪದೇ ಪದೇ ಎಡತಾಕುವ ನಾಯಕರು, ಆ ನಂತರ ಪತ್ತೆ ಇರುವುದಿಲ್ಲ. ನಾಯಕನಾದವನು ಕ್ಷೇತ್ರದ ಜನರ ಸಮಸ್ಯೆಗಳನ್ನು ಅರಿತುಕೊಂಡು ಕೆಲಸ ಮಾಡಬೇಕು. ಜನಸೇವೆ ಮಾಡುವುದರಲ್ಲಿ ತೃಪ್ತಿ ಕಾಣಬೇಕು. ಆಕರ್ಷಕ ಪ್ರಣಾಳಿಕೆ ರೂಪಿಸಿದರೆ ಸಾಲದು. ಅದಕ್ಕೆ ಬದ್ಧರಾಗಿರಬೇಕು. ಶಿಕ್ಷಣ, ವಸತಿ, ಆರೋಗ್ಯ ಕ್ಷೇತ್ರಕ್ಕೆ ಒತ್ತು ಕೊಡಬೇಕು.

-ಡಾ.ನಿರ್ಮಲಾ ಬಟ್ಟಲ

ಸೋಮಾರಿಯಾಗಿರಬಾರದು

ಚುನಾವಣೆ ಸಂದರ್ಭದಲ್ಲಿ ಮಾತ್ರ ಮನೆ ಮನೆಗೆ ತೆರಳಿ ಮತಕ್ಕಾಗಿ ಜನರನ್ನ ಒಲಿಸಿಕೊಳ್ಳುವುದಲ್ಲ, ಕೊನೆಯವರೆಗೂ ಅವರ ನಂಬಿಕೆಗೆ ಮೋಸ ಆಗದಂತೆ ನೋಡಿಕೊಳ್ಳಬೇಕು. ನಾಯಕನಾದವನು ಭ್ರಷ್ಟಾಚಾರಕ್ಕೆ ಆಸ್ಪದ ನೀಡಬಾರದು. ಮಹಿಳೆಯರು ಹಾಗೂ ಮಕ್ಕಳ ಮೇಲೆ ಅತ್ಯಾಚಾರ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನಾಯಕನಿಗೆ ಮೊದಲು ಮಾನವೀಯತೆ ಇರಬೇಕು. ದುಡ್ಡಿನ ಆಸೆ ಇರಬಾರದು. ಸೋಮಾರಿಯಾಗಿರಬಾರದು.

-ಕಿರಣ್‌ ಕುಮಾರ್‌, ಬಿದರಹಳ್ಳಿ

ನೋವನ್ನು ಅರಿಯುವ ನಾಯಕ ಇರಬೇಕು

ನಮ್ಮ ನಾಯಕ ಜನರ ನೋವನ್ನು ಅರಿತುಕೊಳ್ಳಬೇಕು. ಶಿಕ್ಷಿತನಾಗಿರಬೇಕು. ನಿರುದ್ಯೋಗ ತೊಲಗಿಸಬೇಕು. ರೈತರ ಹಿತ ಕಾಪಾಡಬೇಕು. ಮಾರುಕಟ್ಟೆ ವ್ಯವಸ್ಥೆ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ಗ್ರಾಮೀಣ ಭಾರತ ನಿರ್ಮಾಣ ಮಾಡಲು ದುಡಿಯಬೇಕು.

-ಆರ್.ಚೈತ್ರಾ

ಮಹಿಳೆಯರು, ಮಕ್ಕಳಿಗೆ ರಕ್ಷಣೆ ಕೊಡಬೇಕು

ಮಹಿಳೆ ಮತ್ತು ಮಕ್ಕಳಿಗೆ ರಕ್ಷಣೆ ಸಿಗಬೇಕು. ಇದಕ್ಕಾಗಿ ನಮ್ಮ ನಾಯಕ ದುಡಿಯಬೇಕು. ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಬಾರದು. ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರಬಾರದು. ಅಪರಾಧಗಳಿಗೆ ಪ್ರಚೋದನೆ ನೀಡಬಾರದು. ಹಗರಣ ರಹಿತ ಆಡಳಿತ ನೀಡಬೇಕು. ಸಂವಿಧಾನದ ಜ್ಞಾನ ಇರಬೇಕು. ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿರಬೇಕು. ಮೂಲ ಸೌಕರ್ಯ ಕಲ್ಪಿಸಬೇಕು.

-ಎನ್‌.ಗೌತಮಿ, ಎಂಜಿನಿಯರಿಂಗ್ ವಿದ್ಯಾರ್ಥಿ

ಜನರಿಗೋಸ್ಕರ ಶ್ರಮಿಸಬೇಕು

ಪರಿಣಾಮಕಾರಿ ಮತ್ತು ದಕ್ಷ ಆಡಳಿತಗಾರನಾಗಿರಬೇಕು. ಕುಂದುಕೊರತೆಗಳನ್ನು ನಿವಾರಿಸಬೇಕು. ನಾಯಕನಾದವನ ಆಡಳಿತ ಜನರಲ್ಲಿ ವಿಶ್ವಾಸ ಹೆಚ್ಚಿಸಬೇಕು. ಸರ್ಕಾರದ ಯೋಜನೆಗಳನ್ನು ಪ್ರತಿ ಪ್ರಜೆಗೂ ತಲುಪುವಂತೆ ಮಾಡಬೇಕು. ದೇಶದ ಪ್ರಗತಿಗೆ ಶ್ರಮಿಸಬೇಕು. ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು.

-ಎಚ್‌.ದಿವ್ಯಶ್ರೀ, ವಿದ್ಯಾರ್ಥಿನಿ

ಪ್ರಜಾಪ್ರಭುತ್ವ ರಕ್ಷಕನಾಗಿರಬೇಕು

ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು. ಎಲ್ಲಾ ವಲಯಕ್ಕೂ ಸಮಾನ ಆದ್ಯತೆ ನೀಡಬೇಕು. ಸಾಮಾಜಿಕ ನ್ಯಾಯ ಕಾಪಾಡಬೇಕು. ಪ್ರಜೆಗಳ ಭಾವನೆಗೆ ಸ್ಪಂದಿಸುವ ಪ್ರತಿನಿಧಿಯಾಗಿರಬೇಕು. ಭಾರತದ ಸಂವಿಧಾನವನ್ನು ತಿಳಿದುಕೊಂಡಿರಬೇಕು. ಪ್ರಜೆಗಳ ಕಲ್ಯಾಣಕ್ಕೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ರೈತಪರ ಚಿಂತಕರಾಗಿರಬೇಕು.

-ಎಸ್‌.ಪ್ರತಾಪ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.